ಲಾರಿಯೊಂದು ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ವಿದ್ಯುತ್ ತಂತಿಯು ರಸ್ತೆಗೆ ಅಡ್ಡಲಾಗಿ ಬಿದ್ದ ಘಟನೆಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಶ್ರೀ ರಸ್ತೆ ಹೋಟೆಲ್ ಎದುರು ನಿನ್ನೆ ಸಂಜೆ ಉಚ್ಛಿಲದಲ್ಲಿ ನಡೆದಿದೆ .
ವಿದ್ಯುತ್ ಕಂಬ ಬಿದ್ದ ಪರಿಣಾಮ ವಿದ್ಯುತ್ ತಂತಿ ಪಕ್ಕದಲ್ಲಿದ್ದ ಹೊಟೇಲ್‌ಗೆ ತಗುಲಿ ಹೊಟೇಲ್ ಬೆಂಕಾಗಾಹುತಿಯಾಗಿದೆ.
ಇನ್ನು ಘಟನೆ ಸಂಬಂಧ ಕಂಬ ಅಡ್ಡಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಅರ್ಧಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇನ್ನು ಇದೇ ವೇಳೆ ಅಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚರಿಸಿಸುತ್ತಿತ್ತು ಬಸ್ ಭಾರೀ ಅನಾಹುತದಿಂದ ಪಾರಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ