ಕುಂದಾಪುರ:-ಕಾಲು ಜಾರಿ ವ್ಯಕ್ತಿಯೋರ್ವರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕುಂದಾಪುರದ ಸಳ್ವಾಡಿ ಕರಿಕಲ್ಲುಕಟ್ಟೆ ಎಂಬಲ್ಲಿ ನಡೆದಿದೆ.
ಮೃತರನ್ನು ಕಾಳಾವರ ಗ್ರಾಮದ ಸಳ್ವಾಡಿ ಗುಡ್ಡಿಬೆಟ್ಟು ನಿವಾಸಿ ರಘುರಾಮ ಶೆಟ್ಟಿ (53) ಎಂದು ಗುರುತಿಸಲಾಗಿದೆ.
ಇವರು ರಾತ್ರಿ ಯಕ್ಷಗಾನ ನೋಡಿ ನಸುಕಿನ ಜಾವ ಮನೆಗೆ ವಾಪಸ್ ಬರುತ್ತಿದ್ದ ವೇಳೆ ಸಳ್ವಾಡಿ ಕರಿಕಲ್ಲುಕಟ್ಟೆ ಎಂಬಲ್ಲಿರುವ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ