ಈ ಕುರಿತು ಮೃತರ ಪತ್ನಿ ಸುಮತಿ ದೇವಾಡಿಗ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರನ್ನು ಎಲ್ಲೂರು ಗ್ರಾಮದ ಬೆಳ್ಳಿಬೆಟ್ಟು ನಿವಾಸಿ ರಾಜೇಶ್ ದೇವಾಡಿಗ (53) ಎಂದು ಗುರುತಿಸಲಾಗಿದೆ. ಮುದರಂಗಡಿಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಇವರು, ಮನೆ ಕಟ್ಟಲು ಹಾಗೂ ಇತರ ಸಾಲವನ್ನು ಮಾಡಿ ಕೊಂಡಿದ್ದರು.
ಅಲ್ಲದೆ ತಾಯಿಗೆ ಸೇರಿದ ಜಾಗದ ಪಾಲು ಆಗದ ಬಗ್ಗೆಯೂ ನೊಂದಿದ್ದರು. ಹೀಗೆ ತಾನು ಮಾಡಿದ ಸಾಲವನ್ನು ತೀರಿಸಲಾಗದೆ ಜೀವನದಲ್ಲಿ ಜಿಗುಪ್ಸೆಗೊಂಡ ಅವರು, ಶಂಕರಪುರದಲ್ಲಿರುವ ತನ್ನ ತಮ್ಮನ ಶೆಡ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ