ಈ ವೇಳೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಕಾಂತ್ ಸಾಮಂತ್ ಕಾರ್ಯಕ್ರಮವನ್ನು ನಿರೂಪಿಸಿ ಗಣರಾಜ್ಯೋತ್ಸವ ದ ಮಹತ್ವವನ್ನು ತಿಳಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಕುಸುಮ ಪೂಜಾರಿ ಧ್ವಜಾರೋಹಣವನ್ನು ನೇರವೇರಿಸಿ ಗಣರಾಜ್ಯೋತ್ಸವದ ಶುಭ ಹಾರೈಸಿದರು.
ಶಾಲೆಯ ವಠಾರದಲ್ಲಿ ಐರೋಡಿ ಗ್ರಾಮಪಂಚಾಯತ್ ಮತ್ತು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ಸಹಯೋಗದಲ್ಲಿ 17ಲಕ್ಷ ಮೌಲ್ಯದ ಸಭಾಭವನ ನಿರ್ಮಾಣವಾಗಿತ್ತು.
ಶಾಲೆಯ ನೂತನ ಸಭಾಭವನದ ಉಧ್ಘಾಟನ ಸಮಾರಂಭ ನಡೆಯಿತು. ಕಟ್ಟಡವನ್ನು ಗ್ರಾಮಪಂಚಾಯತಿಯ ಅಧ್ಯಕ್ಷರಾದ ಗೀತಾ ಶೆಟ್ಟಿ ಯವರು ಉಧ್ಘಾಟಿಸಿದರು. ಈ ವೇಳೆ ವೇದಿಕೆಯಲ್ಲಿ ಸರಕಾರಿ. ಹಿರಿಯ. ಪ್ರಾಥಮಿಕ ಶಾಲೆ ಬಾಳ್ಕುದ್ರುವಿನ ನಿವೃತ್ತ ಮುಖ್ಯೋಪಾಧ್ಯಾಯಿನಿ ಶಶಿಕಲಾ, ಐರೋಡಿ ಗ್ರಾಮಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ, ಉಪಾಧ್ಯಕ್ಷರಾದ ನಟರಾಜ್ ಗಾಣಿಗ, ಸಿ.ಆರ್.ಪಿ ಮೇಡಮ್ ಅನುಪಮಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯಕ್, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾರ ಕುಸುಮ ಪೂಜಾರಿ ಮತ್ತು ಹಳೆ ವಿದ್ಯಾರ್ಥಿ ರಾಜಾರಾಮ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಕಟ್ಟಡ ನಿರ್ಮಾಣ ಗುತ್ತಿಗೆದಾರರಾದ ಸುರೇಶ್ ಪೂಜಾರಿಯವರನ್ನು ಸನ್ಮಾನಿಸಲಾಯಿತು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ