ಉಡುಪಿಯ ಹೃದಯ ಭಾಗವಾದ ಆದರ್ಶ್ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಪರ್ಯಾಯ ಮಹೋತ್ಸವದ ವೇಳೆ ಡಾಮರೀಕರಣ ನಡೆಸಲಾಗಿತ್ತು, ಈ ವೇಳೆ ರಸ್ತೆಯಲ್ಲಿ ಇದ್ದ ಮ್ಯಾನ್ ಹೋಲ್‌ಗೂ ಡಾಮರ್ ಅಳವಡಿಸಿ ಮುಚ್ಚಲಾಗಿತ್ತು.
ಇದೀಗ ಮ್ಯಾನ್‌ಹೋಲ್ ಕ್ಲೀನಿಂಗ್ ವೇಳೆ ಬೇರೆ ದಾರಿಯಿಲ್ಲದೆ ಪೌರಕಾರ್ಮಿಕರು ರಸ್ತೆಯನ್ನು ಅಗೆದು ಅಲ್ಲಿ ಸ್ವಚ್ಚಗೊಳಿಸಿದ್ದಾರೆ. ಅಗೆದ ಡಾಮರನ್ನು ರಸ್ತೆ ಮಧ್ಯೆಯೇ ಇರಿಸಲಾಗಿದೆ. ಹೀಗಾಗಿ ರಸ್ತೆ ಮಧ್ಯೆಯೇ ಅಲ್ಲಿ ಗುಂಡಿ ನಿರ್ಮಾಣವಾಗಿದ್ದು , ರಸ್ತೆ ಕಿರುದಾಗಿರುವುದರಿಂದ ಜನಸಂಚಾರಕ್ಕೆ ಹಾಗೂ ದ್ವಿಚಕ್ರ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಹೀಗಾಗಿ ಸಂಬಂಧಪಟ್ಟವರು ಈ ಕೂಡಲೇ ಇಲ್ಲಿನ ಸಮಸ್ಯೆಯನ್ನು ಪರಿಹರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ