Slider


ಉಡುಪಿ:-ರಾಜ್ಯ ಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ತುಳು ಕೊಡವ ಭಾಷೆ ಕುರಿತು ಹೋರಾಟದ ಪುಸ್ತಕ ಬಿಡುಗಡೆ 25-1-2022

ರಾಜ್ಯಸಭಾ ಸಂಸದರಾದ ಸನ್ಮಾನ್ಯ ಶ್ರೀ ಬಿ.ಕೆ. ಹರಿಪ್ರಸಾದ್ ಅವರು ಸಂಸತ್ತಿನಲ್ಲಿ ತುಳು ಹಾಗೂ ಕೊಡವ ಬಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಯ ಬಗ್ಗೆ ನಡೆಸಿದ ಹೋರಾಟವನ್ನು ಪುಸ್ತಕದ ರೂಪದಲ್ಲಿ ಸಂಪಾದಕರಾದ ಆರ್ ಜಯಕುಮಾರ್ ಅವರು ರಚಿಸಿದ ತುಳು-ಕೊಡವ ಅಳಿವು ಉಳಿವು (ಸಂಸತ್ತಿನಲ್ಲಿ ಬಿ.ಕೆ. ಹರಿಪ್ರಸಾದ್ -ಭಾಗ 1) ಪುಸ್ತಕ ಬಿಡುಗಡೆ ಸಮಾರಂಭವು ಇಂದು ಕ್ರಿಶ್ಚಿಯನ್ ಆಂಗ್ಲ ಮಾಧ್ಯಮ ಶಾಲೆಯ ಮುಂಭಾಗದಲ್ಲಿ ಇರುವ ಜಗನ್ನಾಥ ಸಭಾಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಸಂಸದರಾದ ಬಿ.ಕೆ. ಹರಿಪ್ರಸಾದ್ ಅವರು ವಹಿಸಿಕೊಂಡರು. ಪುಸ್ತಕ ಬಿಡುಗಡೆಯನ್ನು ಜಾನಪದ ವಿದ್ವಾಂಸರಾದ ಸನ್ಮಾನ್ಯ ಶ್ರೀ ಬನ್ನಂಜೆ ಬಾಬು ಅಮೀನ್ ಅವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಜಯಕರ್ ಶೆಟ್ಟಿ ಇಂದ್ರಾಳಿ, ಡಾ|| ಮಹಾಬಲೇಶ್ವರ್ ರಾವ್ ಅವರು ಉಪಸ್ಥಿತರಿದ್ದರು. 

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು, ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ದಿನಾಕರ್ ಹೇರೂರು, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಪೂಜಾರಿ, ಕೆಮ್ಮಣ್ಣು ಪಂಚಾಯತ್ ಸದಸ್ಯರಾದ ವತ್ಸಲಾ ಹಾಗೂ ಕುಸುಮ, ಸೌರಭ್ ಬಲ್ಲಾಳ್, ಗಣೇಶ್ ದೇವಾಡಿಗ, ಸುರಯ್ಯ ಅಂಜುಮ್, ತಸ್ನೀನ್, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo