ಜಾಗರಣ ವೇದಿಕೆಯ ಪತ್ರಿಕಾ ಪ್ರಕಟಣೆ ಹೊರಬಿದಿದ್ದು ಸದ್ಯ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಪ್ರಕಟನೆಯ ವರದಿ ಹೀಗಿದೆ " ಶಾಲಾ ಸಮವಸ್ತದ ಹಾಗೂ ಬುರ್ಕಾ/ಹಿಜಾಬ್ ವಿವಾದ ಕುರಿತು
"ಜಿಲ್ಲೆಯ ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಹೆಗ್ಗುರುತಾಗಿದ್ದ ಸಮವಸ್ತ್ರಧಾರಣೆ ಕುರಿತು ಕೆಲ ಮತೀಯ ಸಂಘಟನೆಗಳು, ಶಾಲಾ ಶೈಕ್ಷಣಿಕ ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಒಂದು ಕೋಮಿನ ವಿದ್ಯಾರ್ಥಿಗಳನ್ನು ಪ್ರಚೋದನೆಗೆ ಒಳಪಡಿಸಿ ಬುರ್ಕಾ/ಹಿಜಾಬ್ ಧಲಸಿ ಕಾಲೇಜಿನ ಆವರಣದೊಳಗೆ ಪ್ರವೇಶಿಸಲು ಪ್ರಯತ್ನಿಸುವ ಘಟನೆಗಳು ನಡೆಯುತ್ತಿದೆ.
ದಿನದಿಂದ ದಿನಕ್ಕೆ ಹಿಜಾಬ್ ವಿಷಯವನ್ನು ನೆಪವಾಗಿಸಿಕೊಂಡು ಇದೊಂದು ಅಂತರಾಷ್ಟ್ರೀಯ ಮಟ್ಟದ ಸಮಸ್ಯೆ ಎನ್ನುವ ರೀತಿಯಲ್ಲಿ ಬಿಂಬಿಸುವ ಕೆಲಸವೂ ನಡೆಯುತ್ತಿದ್ದು, ಇದರ ಹಿಂದೆ ಕೆಲ ಮತೀಯ ಸಂಘಟನೆಗಳ ಕೈವಾಡವಿರುವುದು ಕೂಡ ಜಗಜ್ಜಾಹೀರಾಗಿದೆ.
ಈಗಾಗಲೇ ಈ ಮೇಲಿನ ಘಟನೆಗಳನ್ನು ಹಿಂದು ಜಾಗರಣ ವೇದಿಕೆ ಗಂಭೀರವಾಗಿ ಪರಿಗಣಿಸಿದ್ದು,ಒಂದು ವೇಳೆ ಸರಕಾರ ಹಾಗೂ ಶಿಕ್ಷಣ ಇಲಾಖೆ ಈ ಷಡ್ಯಂತ್ರದ ಒತ್ತಡಕ್ಕೆ ಮಣಿದು ಹಿಜಾಬ್ ದಲಿಸಲು ಅವಕಾಶ ನೀಡಿದ್ದೇ ಹೌದಾದಲ್ಲಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳ ಹಿಂದು ವಿದ್ಯಾರ್ಥಿಗಳನ್ನು ಸಂಘಟಿಸಿ ಸಮವಸ್ತ್ರದ ಜೊತೆಗೆ ಕೇಸರಿ ಶಲ್ಯ ಧರಿಸುವ ಅಭಿಯಾನವನ್ನು ಕೈಗೊಳ್ಳಲಿದೆ ಎನ್ನುವ ನೇರ ಎಚ್ಚರಿಕೆಯನ್ನು ಸಂಬಂಧ ಪಟ್ಟ ಇಲಾಖೆಗೆ ನೀಡುತ್ತಿದೆ."
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ