ನಿನ್ನೆ ಉಡುಪಿಯಲ್ಲಿ ವರ್ತಕರ ಸಂಘದ ಒಕ್ಕೂಟದವರು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಅವೈಜ್ಞಾನಿಕ ವಾರಾಂತ್ಯ ಕರ್ಫ್ಯೂ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಾ ಇದೇ ಬರುವ ಶನಿವಾರ ರವಿವಾರ ವ್ಯಾಪಾರ ಸ್ಥಗಿತ ಗೊಳಿಸುವುದಿಲ್ಲ ಎಂದಿದ್ದಾರೆ
ಈ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾ ಪ್ರಕಟಣೆ ನೀಡಿದ ಕಾಂಗ್ರೆಸ್ ಮುಖಂಡರುಗಳಾದ ಅಮೃತ್ ಶೆಣೈ ,ಮಾಜಿ ಎಐಸಿಸಿ ಸದಸ್ಯರು ಹಾಗೂ ರಮೇಶ ಕಾಂಚನ್ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ವರ್ತಕರ ನಿರ್ಧಾರ ಸ್ವಾಗಿತಿಸಿದ್ದಾರೆ, ಹಲವಾರು ಮಳಿಗೆಗಳಿಗೆ ಶನಿವಾಎ ರವಿವಾರ ಮಾತ್ರ ಅತಿ ಹೆಚ್ಚಿನ ವ್ಯಾಪಾರ ಆಗುತ್ತದೆ ಈಗಾಗಲೇ ಎರಡು ವರ್ಷಗಳಿಂದ ಕೊರೊನಾ ಹೆಸರಿನಲ್ಲಿ ಸರಕಾರ ತೆಗೆದುಕೊಂಡ ತಲೆ ಬುಡ ಇಲ್ಲದ ನಿರ್ಧಾರಗಳಿಂದ ಜನರ ರೋಸಿಹೋಗಿದ್ದಾರೆ
ರೋಗ ಹರಡದಂತೆ ತಡೆಯಲು ಲಾಕ್ಡೌನ್ ವಿಧಿಸದೆ ಸರಕಾರ ಯಾವುದೇ ಕ್ರಮ ಕೈಗೊಂಡರೂ ಕಾಂಗ್ರೆಸ್ ಕಾರ್ಯಕರ್ತರು ಸಹಕಾರ ನೀಡಲಿದ್ದಾರೆ ಆದರೆ ಇನ್ನುಮುಂದೆ ಜನವಿರೋಧಿ ನೀತಿಗಳಿಗೆ ಸಹಕಾರ ನೀಡಲು ಸಾಧ್ಯವೇ ಇಲ್ಲ ,ವರ್ತಕರ ಜತೆ ಬೀದಿಗಿಳಿದು ಹೋರಾಟ ಮಾಡಲೂ ಪಕ್ಷ ಸಿಧ್ದವಾಗಿದೆ ಎಂದು ತಿಳಿಸಿದ್ದಾರೆ
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ