ಈ ವೇಳೆ ಭೀಕರ ಗಾಯಗೊಂಡು ರಕ್ತಸ್ರಾವ ವಾಗುತ್ತಿರುವ ರೋಗಿಯನ್ನು ವೆನ್ಲಾಕ್ ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸ್ ಚಾಲಕನಿಗೆ ಎದುರಿನಿಂದ ಸಾಗುತ್ತಿದ್ದ ಕಾರಿನ ಚಾಲಕ ದಾರಿಯನ್ನು ಬಿಡದೆ ಮೊಂಡಾಟ ನಡೆಸಿದ ಘಟನೆ ಹಿರಿಯಡ್ಕ ಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಈ ಸಂದರ್ಭ ಆಂಬುಲೆನ್ಸ್ ಚಾಲಕನಿಗೆ ಮಣಿಪಾಲದಿಂದ ಹಿರಿಯಡ್ಕದ ತನಕ kA.19.MD.6843 ನಂಬರಿನ ಕೆಂಪು ಬಣ್ಣದ Chevrolet beatಕಾರು ದಾರಿಯನ್ನು ನೀಡದೆ ಕಾರಿನ ಚಾಲಕ ಮೊಂಡಾಟ ಪ್ರದರ್ಶಿಸಿದ್ದಾನೆ .
ಇನ್ನು ಈ ಬಗ್ಗೆ ಉಡುಪಿ ಫಸ್ಟ್ ಜೊತೆ ಮಾಹಿತಿ ಹಂಚಿಕೊಂಡಿರುವ ಆಂಬುಲೆನ್ಸ್ ಚ ಕಾರು ಚಾಲಕ ದಾರಿ ಬಿಡದೆ ಸತಾಯಿಸಿದ್ದಾನೆ, ಈ ವೇಳೆ ಆಂಬುಲೆನ್ಸ್ ನಲ್ಲಿದ್ದ ರೋಗಿಯೂ ಕೂಡ ಗಂಭೀರ ಸ್ಥಿತಿಗೆ ತಲುಪಿದ್ದರು ಎಂದಿದ್ದಾರೆ.
ನಿನ್ನೆ ನಡೆದ ಈ ಘಟನೆ ಬೇರೆ ಯಾವ ಆಂಬುಲೆನ್ಸ್ ಚಾಲಕನಿಗೆ ಹಾಗೂ ರೋಗಿಯ ಮನೆಯವರಿಗು ಆಗಬಾರದು ಹಾಗೂ ಕಾರಿನ ಚಾಲಕನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಉಡುಪಿ ಫಸ್ಟ್ ನ ಜೊತೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ವರದಿ:-ಉಡುಪಿ ಫಸ್ಟ್.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ