Slider

ಉಡುಪಿ:-ಗ್ಯಾರೇಜ್ ಮಾಲೀಕ ನಾಪತ್ತೆ 20-1-2022

ಕನ್ನರಪಾಡಿಯ ತನ್ನ ಗ್ಯಾರೇಜ್‌ಗೆ ಹೋಗಿದ್ದ ಅಜ್ಜರಕಾಡು ನಿವಾಸಿ ನಾಗೇಶ (47) ಎಂಬವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ನಾಗೇಶ್ ಅವರು ರಾತ್ರಿ ಯಾದರೂ ಮನೆಗೆ ಬಾರದಿದ್ದಾಗ ಅವರ ಪತ್ನಿ ಅವರಿಗೆ ಕರೆ ಮಾಡಿದ್ದರು, ಈ ವೇಳೆ ಅವರು ಫೋನ್ ರಿಸೀವ್ ಮಾಡಲಿಲ್ಲ ನಂತರ ಗ್ಯಾರೇಜ್‌ನ ಸಿಬ್ಬಿಂದಿಗಳಿಗೆ ಕರೆ ಮಾಡಿದಾಗ ನಾಪತ್ತೆ ಯಾದ ಬಗ್ಗೆ ತಿಳಿದು ಬಂದಿದೆ. ಗ್ಯಾರೇಜ್ನಲ್ಲಿ ನಾಗೇಶರವರ ಮೊಬೈಲ್ ಇದ್ದು ಅದರ ಮೇಲೆ ಚೀಟಿ ಕಂಡು ಬಂದಿದೆ. ಈ ಚೀಟಿಯಲ್ಲಿ ಮೊಬೈಲ್ ಪೋನ್ ಲಾಕ್ ಬರೆದಿಟ್ಟು ಹಾಗೂ ನಾನು ಒಂದು ವಾರ ಇರುವುದಿಲ್ಲ ಯಾರೂ ಕೇಳಿದರೂ ಗೊತ್ತಿಲ್ಲ ಎಂದು ಹೇಳಿ ಎಂಬುದಾಗಿ ಬರೆದಿಡಲಾಗಿತ್ತು ಎನ್ನಲಾಗಿದೆ.

ಇವರು ತನ್ನ ಬ್ರೀಜಾ ಕಾರಿನೊಂದಿಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅವರ ಪತ್ನಿ ನೀಡಿದ ದೂರಿನಂತೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo