Slider

ಉಡುಪಿ:-ನೈಟ್‌ಕರ್ಫ್ಯೂ ಉಲ್ಲಂಘಿಸಿ ರಿಸೆಪ್ಷನ್‌ನಲ್ಲಿ ಡಿ.ಜೆ ಕುಣಿತ ಮದುಮಗ ಸೇರಿದಂತೆ ನಾಲ್ವರ ವಿರುದ್ದ ಕೇಸ್ ದಾಖಲು2-1-2022

ಉಡುಪಿ:-ನೈಟ್‌ಕರ್ಫ್ಯೂ ಉಲ್ಲಂಘಿಸಿ ರಿಸೆಪ್ಷನ್ ಕಾರ್ಯಕ್ರಮದಲ್ಲಿ ತಡರಾತ್ರಿ ಡಿ.ಜೆ ಹಾಕಿ ಕುಣಿಯುತ್ತಿದ್ದ ಮದುಮಗ ಸೇರಿದಂತೆ ನಾಲ್ವರ ವಿರುದ್ದ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಡಗುಬೆಟ್ಟು ಗ್ರಾಮದ ಪಣಿಯಾಡಿ ಎಂಬಲ್ಲಿ ಶಿವರಾಮ್ ಶೆಟ್ಟಿಗಾರ್ ಎಂಬವರ ಮನೆಯ ಅವರ ಮಗ ಧೀರಜ್ ಮದುವೆ ರಿಸೆಪ್ಷನ್ ಕಾರ್ಯಕ್ರಮದ ವೇಳೆ ಅನುಮತಿ ಇಲ್ಲದೆ ನೈಟ್ ಕರ್ಫ್ಯೂ ಉಲ್ಲಂಘಿಸಿ ಡಿ.ಜೆ ಸೌಂಡ್ ಹಾಕಿ ಕುಣಿಯುತ್ತಿದ್ದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಸ್ಥಳದಲ್ಲಿದ್ದ ಎರಡು ಡಿಜೆ ಸೌಂಡ್ ಬಾಕ್ಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಉಡುಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo