Slider


ಕೋಟ:-ಪ್ರೀತಿ ವಿಚಾರಕ್ಕೆ ಮನೆಯಲ್ಲಿ ಗಲಾಟೆ ಯುವತಿ ನಾಪತ್ತೆ 19-1-2022

ಕುಂದಾಪುರ : ಕುಂದಾಪುರ ತಾಲೂಕಿನ ಉಳ್ಚೂರು ಗ್ರಾಮದ ಕಳ್ಳಿಗುಡ್ಡೆಯಲ್ಲಿ ಪ್ರೀತಿಯ ವಿಚಾರಕ್ಕೆ ಸಂಬಂಧಿಸಿ ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಗೆ ಹೋದ ಯುವತಿಯೊಬ್ಬಳು ವಾಪಾಸು ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಉಳ್ಚೂರು ಗ್ರಾಮದ ಕಳ್ಳಿಗುಡ್ಡೆಯ ನಿವಾಸಿ ವಸಂತ ಅವರ ಮಗಳು 19 ವರ್ಷದ ಚಂದನಾ ನಾಪತ್ತೆಯಾದ ಯುವತಿ.

ಘಟನೆಗೆ ಸಂಬಂಧಿಸಿದಂತೆ ಈಕೆ ಜನವರಿ.11 ರಂದು ರಾತ್ರಿ ಮನೆಯಲ್ಲಿ ಪೋನಿನಲ್ಲಿ ಮಾತನಾಡುತ್ತಿದ್ದಳು. ಈ ವೇಳೆ ತಂದೆ ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಮನೆಯಲ್ಲಿ ಗಲಾಟೆ ನಡೆದು, ಚಂದನಾ ಮನೆ ಬಿಟ್ಟು ಹೋಗಿದ್ದಾಳೆ. 

ಮಗಳು ವಾಪಾಸು ಬರಬಹುದು ಎಂದು ತಂದೆ ಸುಮ್ಮನಿದ್ದು, ಬಳಿಕ ಮಗಳಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಈವರೆಗೂ ಚಂದನಾ ಪತ್ತೆಯಾಗಿಲ್ಲ. 

ನಂತರ ಈ ವಿಚಾರದ ಕುರಿತು ತಂದೆ ವಸಂತರವರು ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಯುವತಿಯ ಕುರಿತು ‌ಯುವತಿಯ ಚಹರೆ : 5 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ ಹಾಗೂ ಕನ್ನಡ ಭಾಷೆ ಮಾತನಾಡಬಲ್ಲವಳಾಗಿದ್ದಾಳೆ. 

ಈಕೆಯ ಬಗ್ಗೆ ನಿಮಗೆ ಮಾಹಿತಿ ಸಿಕ್ಕಿದಲ್ಲಿ ಕೋಟ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ : 0820- 2564 155, ಹಾಗೂ ಮೊಬೈಲ್ ಸಂಖ್ಯೆ: 94808 05454 ಸಂಪರ್ಕಿಸುವಂತೆ ಕೋರಲಾಗಿದೆ .
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo