ಮಲ್ಪೆ ಸಮುದ್ರದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದ ಮಾನಸಿಕ ಖಿನ್ನತೆಗೊಳಗಾಗಿದ್ದ ಮಹಿಳೆಯನ್ನು ಸಮಾಜ ಸೇವಕ ಶಿಶು ಶೆಟ್ಟಿ ರಕ್ಷಿಸಲ್ಪಟ್ಟ ಘಟನೆ ನಡೆದಿದೆ.
ಕೋಟದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದವರಾಗಿದ್ದಾರೆ.ಇವರ ತಂದೆ ತಾಯಿ ತೀರಿಕೊಂಡಿದ್ದು, 30ರ ಹರೆಯದ ಅವಿವಾಹಿತೆ ಒಂಟಿಯಾಗಿ ವಾಸಿಸುತ್ತಿದ್ದಳು. ತಾನು ಮಾನಸಿಕವಾಗಿ ಬಹಳಷ್ಟು ನೊಂದಿದ್ದೇನೆ, ಬದುಕು ಹಿಂಸೆಯಾಗಿದೆ, ನಾನು ಮರಳಿ ಆತ್ಮಹತ್ಯೆಗೆ ಶರಣಾಗುತ್ತೇನೆ ಎಂದು ಹೇಳಿಕೆ ನೀಡಿದ್ದಾಳೆ.
ವಿಷಯ ತಿಳಿದ ವಿಶು ಶೆಟ್ಟಿ ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.ರಾಜ್ಯ ಮಹಿಳಾ ಸಹಾಯವಾಣಿಗೆ ಮಹಿಳೆಯ ಮುಂದಿನ ರಕ್ಷಣೆ ಹಾಗೂ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ವಿಶು ಶೆಟ್ಟಿ ಆಗ್ರಹಿಸಿದ್ದಾರೆ .
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ