ಶಿರಸಿ ಸರಕಾರಿ ಪದವಿ ಕಾಲೇಜಿನಲ್ಲಿ ಕಾಮರ್ಸ್ ಓದುತ್ತಿದ್ದ ವಿಧ್ಯಾರ್ಥಿ ಶಿರಸಿಯ ಸುಬ್ರಹ್ಮಣ್ಯ ವಿನಾಯಕ ಹೆಗಡೆ (18 ) ನೀರುಪಾಲಾದ ಯುವಕನೆಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಮೂವರು ಸ್ನೇಹಿತರು ಸೇರಿ ಪೋಟೋ ಶೂಟ್ ಗೆ ಶಿವಗಂಗಾ ಫಾಲ್ಸ್ ಗೆ ಹೋಗಿದ್ದರು. ಈ ವೇಳೆ ಕಲ್ಲು ಬಂಡೆಯ ನಡುವೇ ಪೊಟೋ ತೆಗೆಯುತ್ತಿರುವಾಗ ಕಾಲು ಜಾರಿ ಬಿದ್ದು ವಿದ್ಯಾರ್ಥಿ ಸಾವಿಗೆ ಈಡಾಗಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ವಿದ್ಯಾರ್ಥಿಯ ಶವಕ್ಕಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಮತ್ತು ಈಜುಗಾರರಿಂದ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ಶಿರಸಿ ಆರಕ್ಷಕ ಠಾಣೆಯ ಸಿ.ಪಿ.ಐ. ರಾಮಚಂದ್ರ ನಾಯಕ ಹಾಗೂ ಪಿ.ಎಸ್.ಐ. ಈರಯ್ಯ ಸ್ಥಳಕ್ಕೆ ಆಗಮಿಸಿ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ