ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಶರವು ಪಡ್ಪು ಎಂಬಲ್ಲಿನ ಹರೀಶ್ ರವರ ಪತ್ನಿ ಪ್ರೇಮ ದೂರುದಾರರಾಗಿದ್ದಾರೆ. ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲ ನಿವಾಸಿ ರೋಹಿಣಿ ಸಿ ಯಾನೆ ರೂಪ ಪ್ರಕರಣದ ಆರೋಪಿಯಾಗಿದ್ದಾರೆ.
ನನ್ನ ಸಬಂಧಿಯಾದ ರೋಹಿಣಿ ಸಿ ಯಾನೆ ರೂಪ ರವರು ನನ್ನಲ್ಲಿ ಕಾರ್ ಎಡ್ಯುಕೇಷನ್ ಪ್ಲ್ಯಾನಿಂಗ್ ಇನ್ವೆಸ್ಟ್ಮೆಂಟ್ ನಲ್ಲಿ ಹಣ ಇಡುವಂತೆ ಒತ್ತಾಯ ಮಾಡಿದ್ದರು. ಅದರಂತೆ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಶರವು ಪಡ್ಡು ಎಂಬಲ್ಲಿಗೆ ಬಂದ ಅವರು ನನ್ನಲ್ಲಿ ಒಟ್ಟು ಐದು ಲಕ್ಷ ರೂಪಾಯಿಯ ವ್ಯವಹಾರ ನಡೆಸಿದ್ದು, ಇವುಗಳಲ್ಲಿ 1,50,000 ರೂಪಾಯಿ ಹಣಕ್ಕೆ ಬೇರೆ ಬೇರೆ ರಶೀದಿಯನ್ನು ನೀಡಿರುತ್ತಾರೆ.
ಉಳಿದ ಹಣಕ್ಕೆ ಯಾವುದೇ ರಶೀದಿಯನ್ನು ನೀಡಿರುವುದಿಲ್ಲ. ನಂತರ ನನ್ನ ಕರ್ಣಾಟಕ ಬ್ಯಾಂಕ್ ಖಾತೆಗೆ ಒಟ್ಟು 1,10,000 ರೂಪಾಯಿ ಹಣವನ್ನು ಕಳುಹಿಸಿರುತ್ತಾರೆ. ಉಳಿದ 3.9 ಲಕ್ಷ ರೂಪಾಯಿ ಹಣವನ್ನು ಕೇಳಲು ನಾನೂ ಹಾಗೂ ತನ್ನ ಅಕ್ಕನ ಮಗ ಪೃಥ್ವಿ ರಾಜ್ ನೊಂದಿಗೆ ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲದಲ್ಲಿರುವ ರೋಹಿಣಿ ಸಿ ಯಾನೆ ರೂಪ ರವರ ಮನೆಗೆ ತೆರಳಿ ವಿಚಾರಿಸಿದಾಗ ಉಳಿದ ಹಣ ನಾನು ನಿನಗೆ ಕೊಡುವುದಿಲ್ಲ.
ನೀನು ಏನು ಬೇಕಾದರೂ ಮಾಡು ಎಂದು ಹೇಳಿದ್ದಾರೆ ಎಂದು ಪ್ರೇಮರವರು ವಿಟ್ಲ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ