ರಾಜಸ್ಥಾನದ ಉದಯಪುರ ಮೂಲದ ಮಹೇಂದ್ರ ಸಿಂಗ್ ರಾವ್ (33) ನನ್ನು ಬಂಧಿತನಾಗಿದ್ದು, ಈತನನ್ನು ಮಂಗಳೂರು ಸೆಂಟ್ರಲ್‍ನಲ್ಲಿರುವ ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಆರ್‍ಪಿಎಫ್ ಪ್ರಕಟಣೆ ತಿಳಿಸಿದೆ.
ಘಟನೆಗೆ ಸಂಬಂಧಿಸಿದಂತೆ ಸಿಆರ್‍ಪಿಸಿ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ರೈಲ್ವೆ ಪೊಲೀಸರು ಆತನ ಬಂಧನವನ್ನು ದಾಖಲಿಸಿದ್ದಾರೆ. ರೈಲ್ವೆ ಪೊಲೀಸ್ ಸಿಬ್ಬಂದಿ ದುರೊಂತೋ ಎಕ್ಸ್ ಪ್ರೆಸ್‍ನ ಎಸ್ 4 ಕೋಚ್‍ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಲಗೇಜ್‍ಗಳನ್ನು ಪರಿಶೀಲಿಸಿದಾಗ ಹಳೆಯ ದಿನಪತ್ರಿಕೆಗಳಲ್ಲಿ ಸುತ್ತಿದ ಕರೆನ್ಸಿ ಬಂಡಲ್‍ಗಳು ಸಿಕ್ಕಿವೆ.
ಕೇರಳದ ಕೋಝಿಕ್ಕೋಡ್‍ನಲ್ಲಿ ಪ್ರವೀಣ್ ಸಿಂಗ್ ಮಾಲೀಕತ್ವದ ಶುಭ್ ಗೋಲ್ಡ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ತಮ್ಮ ಮಾಲೀಕರು ಮುಂಬೈನಲ್ಲಿರುವ ಅವರ ಸ್ನೇಹಿತರಿಗೆ ನೀಡಲು ಆರು ಪ್ಯಾಕ್ ಕರೆನ್ಸಿ ನೋಟುಗಳು ಮತ್ತು ಮೂರು ಪ್ಯಾಕೆಟ್ ಆಭರಣಗಳನ್ನು ಕೊಟ್ಟಿದ್ದಾರೆ ಎಂದು ಮಹೇಂದ್ರ ರೈಲ್ವೆ ಪೊಲೀಸರಿಗೆ ತಿಳಿಸಿದ್ದಾನೆ.
ವಶಪಡಿಸಿಕೊಂಡ ನಗದಿನಲ್ಲಿ 2000 ಮತ್ತು 500 ರೂ. ಮುಖಬೆಲೆಯ ನೋಟುಗಳು, 40 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಸಿಕ್ಕಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ