ಉಡುಪಿ : ಮಲ್ಪೆ ಕಡಲ ಕಿನಾರೆಯಲ್ಲಿ ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಲು ಸಾಕಷ್ಟು ಜನ ಸೇರಿದ್ದರು. ಆ ಸಮಯದಲ್ಲಿ ಕಡಲ ಕಿನಾರೆಯಲ್ಲಿ ಹೊಸ ವರ್ಷದ ಪ್ರಯುಕ್ತ ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ರಾತ್ರಿ 10:00 ಗಂಟೆಯ ಬಳಿಕ ಕರ್ಪ್ಯೂ ಇರುವ ಕಾರಣ ಸಂಜೆಯಿಂದಲೇ ಜನ ಮಲ್ಪೆಯತ್ತ ದೌಡಾಯಿಸಿದರು. ಇದೇ ವೇಳೆ ಹೆಸರಾಂತ ರ್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ದಂಪತಿ ಉಡುಪಿಗೆ ಆಗಮಿಸಿ ಸಂಭ್ರಮ ಪಟ್ಟರು.
ಮಲ್ಪೆ ಕಡಲಕಿನಾರೆಯಲ್ಲಿ ಚಂದನ್ ನಿವೇದಿತಾ 2021 ರ ಕೊನೆಯ ದಿನವನ್ನು ಎಂಜಾಯ್ ಮಾಡುತ್ತಿದ್ದು, ತಮಗಿಷ್ಟದ ಸೀ ಪುಡ್ ಸವಿದರು. ನನಗೆ ಉಡುಪಿಯ ಮಲ್ಪೆ ಕಡಲ ಕಿನಾರೆ ಅಂದರೆ ತುಂಬಾ ಇಷ್ಟ. ಹೀಗಾಗಿ 2021 ನ್ನು ಬಿಳ್ಕೊಟ್ಟು 2022 ನ್ನು ಅದ್ಧೂರಿಯಾಗಿ ವೆಲ್ಕಮ್ ಮಾಡೋಕೆ ಪತ್ನಿ ಜೊತೆ ಉಡುಪಿಗೆ ಆಗಮಿಸಿದ್ದೇನೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ