ಉಚ್ಚಿಲ:-ಖಾಸಗಿ ಬಸ್ ಢಿಕ್ಕಿ ಹೊಡೆದು ವ್ಯಕ್ತಿ ಸಾವು
ಉಚ್ಚಿಲ: ಪಾದಚಾರಿಯೋರ್ವರು ರಸ್ತೆ ದಾಟುವ ಸಂದರ್ಭದಲ್ಲಿ ನವದುರ್ಗಾ ಸಂಸ್ಥೆಯ ಖಾಸಗಿ ಎಕ್ಸಪ್ರೆಸ್ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟ ಘಟನೆ ಮೂಳೂರಿನಲ್ಲಿ ನಡೆದಿದೆ.
ಮೃತನ ವ್ಯಕ್ತಿಯು ಬಳ್ಳಾರಿ ಮೂಲದ ಹರಿ ಓಂ (60) ಎಂದು ತಿಳಿದುಬಂದಿದೆ. . ಬಸ್ ಹೊಡೆದ ರಭಸಕ್ಕೆ ಬಸ್ ಇವರ ಮೇಲೆ ಹರಿದು ದೇಹದ ಭಾಗಗಳು ಚಿದ್ರಚಿದ್ರವಾಗಿ ಹೋಗಿದೆ.
ಮೃತ ವ್ಯಕ್ತಿಗೆ ಒಬ್ಬಳು ಮಗಳಿದೆ ಎಂದು ತಿಳಿದುಬಂದಿದೆ.ಘಟನ ಸ್ಥಳಕ್ಕೆ ತಕ್ಷಣ ಉಚ್ಚಿಲ ಪೋಲಿಸರು ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ