Slider

ಕಾಪು ಪುರಸಭೆ ಚುನಾವಣೆ:-ಶೇ73.95ರಷ್ಟು ಮತದಾನ27-12-2021

ಇಂದು ಕಾಪು ಪುರಸಭೆಯ 23 ವಾರ್ಡ್ ಗಳ 23 ಮತಗಟ್ಟೆಗಳಲ್ಲಿ ಸಾರ್ವತ್ರಿಕ ಚುನಾವಣೆಯು ಶಾಂತಿಯುತವಾಗಿ ನಡೆಯಿತು.

 ಒಟ್ಟು 17366 ಮತದಾರರಿದ್ದು, ಈ ಪೈಕಿ 8196 ಪುರುಷ ಮತದಾರರಲ್ಲಿ 5772 ಮತದಾರರು, 9170 ಮಹಿಳಾ ಮತದಾರರಲ್ಲಿ 7070 ಮತದಾರರು ಮತ ಚಲಾವಣೆ ಮಾಡಿದ್ದು ಶೇ. 73.95% ಮತದಾನ ಆಗಿರುತ್ತದೆ.
ವಾರ್ಡ್ 1 (ಕೈಪುಂಜಾಲು) ರಲ್ಲಿ ಶೇ. 80.12% ಮತದಾನವಾಗಿದ್ದು, ಇದು ಅತೀ ಹೆಚ್ಚು ಮತದಾನವಾಗಿರುವ ವಾರ್ಡ್ ಆಗಿದ್ದು, ವಾರ್ಡ್ 15 (ಮಂಗಳಾಪೇಟೆ) ಶೇ. 64.33 % ಮತದಾನವಾಗಿದ್ದು, ಇದು ಅತೀ ಕಡಿಮೆ ಮತದಾನವಾಗಿವ ವಾರ್ಡ್ ಆಗಿರುತ್ತದೆ.ಮತ ಎಣಿಕೆಯು ದಿನಾಂಕ: 30-12-2021 ರಂದು ಪೂರ್ವಾಹ್ನ 8 ಗಂಟೆಯಿಂದ ಕಾಪು ಪುರಸಭಾ ಕಾರ್ಯಾಲಯದಲ್ಲಿ ನಡೆಯಲಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo