ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡ್ತಿದ್ಯಾ ಮಂಗಳೂರು ವಿಶ್ವವಿದ್ಯಾಲಯ..? ಕೇಳೋರಿಲ್ಲದಂತಾಗಿದೆ ವಿದ್ಯಾರ್ಥಿಗಳ ಗೋಳು..?
ಉಡುಪಿ/ದ.ಕ:ವಿದ್ಯಾರ್ಥಿಗಳ ಹಿತದ ಪರವಾಗಿ ಕಾರ್ಯನಿರ್ವಹಿಸಬೇಕಿದ್ದ ಮಂಗಳೂರು ವಿಶ್ವವಿದ್ಯಾಲಯ ತನ್ನ ಎಲ್ಲಾ ಜವಾಬ್ದಾರಿಯನ್ನು ಮರೆತು ತನ್ನ ಕರ್ತವ್ಯದಿಂದ ನುಣಿಚಿಕೊಳ್ಳುವ ಯತ್ನ ನಡೆಸಿದ್ಯಾ..? ಹೀಗೊಂದು ಅನುಮಾನವನ್ನು ಮೂಡಿಸುವಂತಿದೆ ಮಂಗಳೂರು ವಿಶ್ವವಿದ್ಯಾಲಯದ ನಡೆ.
ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳನ್ನು ನಡೆಸುವಲ್ಲಿ ಮಾಡಿದ ಯಡವಟ್ಟಿನ ಸರಮಾಲೆ ಇದೀಗ ಫಲಿತಾಂಶದವರೆಗೂ ಮುಂದುವರಿದಿದೆ ಎಂದು ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರವನ್ನೇ ನೀಡದೆ ಪರೀಕ್ಷೆ ನಡೆಸಿದ್ದ ವಿವಿ ಇದೀಗ ಫಲಿತಾಂಶದಲ್ಲೂ ತನ್ನ ಬೇಜವಾಬ್ದಾರಿ ನಡೆಯನ್ನು ಮುಂದುವರೆಸಿದೆ. ಮೊದಲು ನವೆಂಬರ್ 23ನೇ ತಾರೀಕಿಗೆ ಪದವಿ ಫಲಿತಾಂಶ ಪ್ರಕಟಿಸುತ್ತೇವೆ ಎಂದು ಘೋಷಿಸಿದ್ದ ವಿವಿ ತಾಂತ್ರಿಕ ಕಾರಣದ ನೆಪವೊಡ್ಡಿ ನವೆಂಬರ್ 29ಕ್ಕೆ ಫಲಿತಾಂಶವನ್ನು ಮುಂದೂಡಿತ್ತು, ನಂತರ 29 ನೇ ತಾರೀಕಿಗೆ ಸರ್ವರ್ ಸಮಸ್ಯೆಯ ಸಬೂಬೂ ಎಂದಿನಂತೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಂದಿತ್ತು, ಜೊತೆಗೆ ಫಲಿತಾಂಶದ ಡಾಟಾಗಳನ್ನು ಅಪ್ಲೋಡ್ ಮಾಡುವಲ್ಲಿ ತಪ್ಪಾಗಿದೆ ಎಂದು ಸ್ವತಃ ವಿಶ್ವವಿದ್ಯಾಲಯ ತನ್ನ ತಪ್ಪನ್ನು ಒಪ್ಪಿಕೊಂಡಿತ್ತು. ಇದಾದ ನಂತರ ಮತ್ತೆ ಫಲಿತಾಂಶವನ್ನು ಮುಂದೂಡಿತ್ತು.
ಇದೀಗ ಹಲವು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಆದರೆ ಫಲಿತಾಂಶ ಪ್ರಕಟವಾಗಿ ಒಂದು ವಾರ ಕಳೆದರೂ ಕೆಲವು ವಿದ್ಯಾರ್ಥಿಗಳ ಫಲಿತಾಂಶ ಇನ್ನೂ ಕೂಡ ಬಂದಿಲ್ಲ, ಕೆಲವು ವಿದ್ಯಾರ್ಥಿಗಳ ಐದನೇ ಸೆಮಿಸ್ಟರ್ ಹಾಗೂ ಇನ್ನು ಕೆಲವು ವಿದ್ಯಾರ್ಥಿಗಳ ಆರನೇ ಸೆಮಿಸ್ಟರ್ ಫಲಿತಾಂಶ ಪ್ರಕಟಗೊಂಡಿಲ್ಲ ಹೀಗಾಗಿ ವಿದ್ಯಾರ್ಥಿಗಳು ತಮ್ಮ ಮುಂದಿನ ಉನ್ನತ ಶಿಕ್ಷಣಕ್ಕೆ ತೆರಳಲು ಪರಿತಪಿಸುವಂತಾಗಿದೆ.
ಈ ಬಗ್ಗೆ ಉಡುಪಿ ಫಸ್ಟ್ ಜೊತೆ ಮಾತನಾಡಿದ ಪದವಿ ವಿದ್ಯಾರ್ಥಿ ಹೇಳಿದ್ದು ಹೀಗೆ..
" ಈ ಬಗ್ಗೆ ಕಾಲೇಜಿನ ಬಳಿ ವಿಚಾರಿಸಿದಾಗ ಯುನಿವರ್ಸಿಟಿ ಕಡೆ ಬೊಟ್ಟು ಮಾಡಿ ತೋರಿಸುತ್ತಾರೆ ಯುನಿವರ್ಸಿಟಿ ಬಳಿ ಕೇಳಿದಾಗ ಕಾಲೇಜಿನಲ್ಲಿ ವಿಚಾರಿಸಿ ಎಂದು ಹೇಳುತ್ತಾರೆ. ಈಗಾಗಲೇ ಸ್ನಾತ್ತಕೋತ್ತರ ತರಗತಿಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ.. ಎಲ್ಲಾ ಕಾಲೇಜಿನಲ್ಲೂ ಸೀಟ್‌ಗಳೂ ಕೂಡ ಭರ್ತಿಯಾಗುತ್ತಿದೆ... ಸ್ನಾತ್ತಕೋತ್ತರ ತರಗತಿಯ ಪ್ರವೇಶಾತಿಗೆ ಪದವಿ ಫಲಿತಾಂಶ ಪ್ರಕಟವಾಗಿದ್ದರೆ ಮಾತ್ರ ಪ್ರವೇಶಾತಿ ಎಂದು ಕಾಲೇಜುಗಳು ಹೇಳುತ್ತಿವೆ.. ಹೀಗಾಗಿ ಆದಷ್ಟು ಬೇಗ ವಿವಿ ಎಲ್ಲಾ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಬೇಕು ಎಂದು ವಿದ್ಯಾರ್ಥಿ ಆಗ್ರಹಿಸಿದ್ದಾರೆ.
ಮಂಗಳೂರು ವಿವಿಯ ಅವಾಂತರಗಳು ಕೇವಲ ಇಷ್ಟಕ್ಕೇ ಮುಗಿದಿಲ್ಲ .. ಈಗಾಗಲೇ ಪ್ರಕಟಿಸಿದ ಫಲಿತಾಂಶದಲ್ಲೂ ಸಾಲು ಸಾಲು ಯಡವಟ್ಟುಗಳನ್ನು ಮಾಡಿಕೊಂಡಿದೆ. ಉತ್ತಮ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನು ಫೇಲ್ ಮಾಡಿದೆ. ಜೊತೆಗೆ ಮಾರ್ಕ್ಸ್ ಡಾಟಾ ಎಂಟ್ರಿ ಮಾಡುವಲ್ಲೂ ತಪ್ಪುಗಳು ನಡೆದಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಮಂಗಳೂರು ವಿವಿ (ಮುಂದೂಡಿಕೆ ವಿವಿ) ಎಂಬ ಹಣೆಪಟ್ಟಿಯನ್ನು ಹೊತ್ತು ಕೊಳ್ಳುವ ಮುನ್ನ ಸರಿಯಾದ ರೀತಿಯಲ್ಲಿ ಫಲಿತಾಂಶವನ್ನು ಪ್ರಕಟಿಸಬೇಕಾದ ಜವಾಬ್ದಾರಿ ವಿವಿಯ ಮೇಲಿದೆ.
ವರದಿ:-ಉಡುಪಿ ಫಸ್ಟ್
TRENDING
-
ಮಲ್ಪೆ, ಏ. ೧೫: ಮಲ್ಪೆ ಜಂಕ್ಷನ್ ಬಳಿಯ ಜಾಮೀಯಾ ಮಸೀದಿಯ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಮಸೀದಿಯ ಮೇನೆಜರ್ ಸುಹೇ...
-
ಉಡುಪಿ: ತೆಂಕಪೇಟೆಯ ಹೋಟೆಲ್ ವೊಂದರ ಮಾಲಕ ಅಜಿತ್ ಕುಮಾರ್(48) ನಾಪತ್ತೆಯಾಗಿದ್ದು, ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತೆಂಕಪೇಟೆಯಲ್ಲಿ ಶ್ರೀರಾಮ ಭವನ ಎಂಬ...
-
ಪ್ರವೀಣ್ ನೆಟ್ಟಾರು ಕೊಲೆ ಮಾಡಿದ ದೇಶದ್ರೋಹಿಗೆ ಮತ್ತೊಬ್ಬ ದೇಶದ್ರೋಹಿ ಮುತ್ತು ಕೊಟ್ಟಿದ್ದಾನೆ. ರಾಜ್ಯದಲ್ಲಿದ್ದಿದ್ದರೆ ಆ ದೇಶದ್ರೋಹಿನ ಗುಂಡಿಕ್ಕಿ ಕೊಲ್ಲುವಂತ ಕೆಲಸ ...
-
ಉಡುಪಿ: ಮಲ್ಪೆಯ ಮಸೀದಿ ಆವರಣದ ಶೌಚಾಲಯದಲ್ಲಿ ನವಜಾತ ಶಿಶು ಶವಪತ್ತೆ ವಿಚಾರವಾಗಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಹೇಳಿಕೆ ನೀಡಿದ್ದಾರೆ. ಮ...
Slider
ಜಾಹೀರಾತಿಗಾಗಿ ಸಂಪರ್ಕಿಸಿ
ಫೋನ್: 86605 39735
ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡ್ತಿದ್ಯಾ ಮಂಗಳೂರು ವಿಶ್ವವಿದ್ಯಾಲಯ..? ಕೇಳೋರಿಲ್ಲದಂತಾಗಿದೆ ವಿದ್ಯಾರ್ಥಿಗಳ ಅಳಲು..?6-12-2021
0
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
Mega Menu
blogger
About Us
LABELS
© all rights reserved
made with by templateszoo
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ