ಕುಂದಾಪುರ: ನಾವುಂದ ಮೂಲದ ಪುಟ್ಟ ಪುಟಾಣಿ ವಂಶಿತ್ ಬ್ಲಡ್ ಕ್ಯಾನ್ಸರ್ ನಿಂದು ಬಳಲುತ್ತಿದ್ದು ಇವರ ತಂದೆ ತಾಯಿಯ ಬಳಿ ಆ ಚಿಕಿತ್ಸೆಗೆ ಬೇಕಾದ ಅಧಿಕ ಮೊತ್ತವನ್ನು ಹೊಂದಿಸಲಾಗದೆ ದಾನಿಗಳತ್ತ ತನ್ನ ಕೈಯನ್ನು ಚಾಚಿದ್ದರು.
ಈ ಸಂದರ್ಭದಲ್ಲಿ ಸಮಾಜಸೇವಕ, ಸಮಾಜಕ್ಕೆ ಮಾದರಿಯಾಗುವ ಅನೇಕ ಕೆಲಸವನ್ನು ಮಾಡುತ್ತಿರುವ, ಜಿಲ್ಲೆಯ ಜಿಲ್ಲಾ ರಕ್ಷಕ ಎನ್ನುವ ಪ್ರಶಸ್ತಿಯನ್ನು ಮುಡಿಲಿಗೇರಿಸಿಕೊಂಡಿರುವ ಜೀವನ್ ಮಿತ್ರ ಸಂಸ್ಥೆಯ ಮಾಲಿಕರಾದ ನಾಗರಾಜ್ ಪುತ್ರನ್ ಮತ್ತು ತಂಡ ಮಗುವಿನ ಚಿಕಿತ್ಸೆಗೆ ನೆರವಾಗಿದ್ದಾರೆ.
ಶನಿವಾರ ಕುಂದಾಪುರದ ಕುಂದೇಶ್ವರ ದೀಪೋತ್ಸವದಲ್ಲಿ ಈ ಮಗುವಿಗೋಸ್ಕರ ಪೆಟ್ಟಿಗೆಯನ್ನು ಹಿಡಿದು ರಾತ್ರಿಯ ವೇಳೆ ಹಬ್ಬದ ಗಲ್ಲಿ ಗಲ್ಲಿಯಲ್ಲಿ ತಿರುಗಿ ಜೀವನ್ ಮಿತ್ರ ಸೇವಾ ಸಂಸ್ಥೆಯ ಮಾಲಿಕರಾದ ನಾಗರಾಜ್ ಪುತ್ರನ್ ಮತ್ತು ತಂಡ ಒಟ್ಟು 67762 ಸಂಗ್ರಹಿಸಿದರು.
ಸಂಗ್ರಹಿಸಿದ ಹಣವನ್ನು ಕೋಟ ಅಮೃತೇಶ್ವರಿ ದೇವಸ್ಥಾನದ ಅರ್ಚಕರ ಮುಖೇನ ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಜಿತ್ ದೇವಾಡಿಗ ಇವರ ಉಪಸ್ಥಿತಿಯಲ್ಲಿ ವಂಶಿತ್ ಕುಟುಂಬಕ್ಕೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಜೀವನ್ ಮಿತ್ರ ಸೇವಾ ಸಂಸ್ಥೆಯ ಮಾಲಿಕರಾದ ನಾಗರಾಜ್ ಪುತ್ರನ್ ದಿನೇಶ್ ಪುತ್ರನ್, ನಾಗೇಂದ್ರ ಪುತ್ರನ್, ಭರತ್ ಗಾಣಿಗ ಕೋಟತಟ್ಟು, ಯೋಗೆಂದ್ರ ಪುತ್ರನ್, ಶಶಿಧರ್ ಪುತ್ರನ್ ಪಡುಕರೆ, ಭಾಸ್ಕರ್ ದೇವಾಡಿಗ ಕೋಟತಟ್ಟು, ಶೇಖರ್ ಪೂಜಾರಿ ಮುಂದಿಟ್ಟು ಮತ್ತಿತರರು ಉಪಸ್ಥಿತರಿದ್ದು ಇವರ ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ