ಉಡುಪಿ:-ಎರಡು ಬೈಕ್‌ಗಳ ನಡುವೆ ಮುಖಾಮುಖಿ ಢಿಕ್ಕಿ ಹೊಡೆದು ಓರ್ವ ಸವಾರ ಸಾವೀಗೀಡಾದ ಘಟನೆ ಉಡುಪಿಯ ಡೊಡ್ಡಣಗುಡ್ಡೆ ತೋಟಗಾರಿಕಾ ಇಲಾಖೆ ಎದುರು ನಡೆದಿದೆ.
ಮೃತ ನನ್ನು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಡ್ಡದ ದೇಲಾಪುರ ನಿವಾಸಿ ಲಕ್ಷ್ಮಣ ಎಂದು ಗುರುತಿಸಲಾ ಗಿದೆ.
ದೊಡ್ಡಣಗುಡ್ಡೆ ಬಾಳಿಗಾ ಆಸ್ಪತ್ರೆಯ ಕಡೆಯಿಂದ ರಸಿಕಾ ಬಾರ್ ಜಂಕ್ಷನ್ ಕಡೆ ಹೋಗುತ್ತಿದ್ದ ಲಕ್ಷ್ಮಣ್ ಅವರ ಬೈಕಿಗೆ ಎದುರಿನಿಂದ ಬರುತ್ತಿದ್ದ ಬೈಕ್ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಲಕ್ಷ್ಮಣ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು
ಅಪಘಾತದಲ್ಲಿ ಸಹ ಸವಾರ ಹನುಮಂತ ಹಾಗೂ ಇನ್ನೊಂದು ಬೈಕಿನ ಸವಾರ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸದ್ಯ ಉಡುಪಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ