Slider

ಬ್ರಹ್ಮಾವರ:-ಸರಣಿ ಅಪಘಾತ, ಓರ್ವ ಸಾವು.5-12-2021

 ಬ್ರಹ್ಮಾವರ:-ಸರಣಿ ಅಪಘಾತ, ಓರ್ವ ಸಾವು.

ಬ್ರಹ್ಮಾವರ:- ಕಾರು , ಮೀನು ಸಾಗಾಟದ ರಿಕ್ಷಾ ಹಾಗೂ ಬೈಕ್ ನಡುವೆ ನಡೆದ ಸರಣಿ ಅಪಘಾತ ಬ್ರಹ್ಮಾವರ ಸ್ಯಾಬ್ರಕಟ್ಟೆ ಹೈಸ್ಕೂಲ್ ಸಮೀಪ ಮಲಸವಾರಿ ದೇವಸ್ಥಾನದ ತಿರುವಿನಲ್ಲಿ ನಡೆದಿದೆ.

ಘಟನೆಯಲ್ಲಿ ಮೀನು ವ್ಯಾಪಾರಿ ಸಾವಿಗೀಡಾಗಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು ಮಣಿಪಾಲ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ .

ಮೃತ ವ್ಯಕ್ತಿಯನ್ನು ರಿಕ್ಷಾ ಚಾಲಕ ಸುರೇಶ್ ಮರಕಾಲ ( 40 ) ಎಂದು ಗುರುತಿಸಲಾಗಿದೆ . ಹಾಗೂ ಸಹಸವಾರ ರಾಜು ಮರಕಾಲ (60) ಬೈಕ್ ಸವಾರ ಶಿರಿಯಾರ ನಿವಾಸಿ ಸುಬ್ರಹ್ಮಣ್ಯ ಕುಲಾಲ್ (42) ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೀನು ವ್ಯಾಪಾರಿ ಎಂದಿನಂತೆ
ಎಂದಿನಂತೆ ಮಲ್ಪೆಯಿಂದ ಮೀನು ತುಂಬಿಸಿಕೊಂಡು ಬರುತ್ತಿದ್ದ ಆಪೆ ರಿಕ್ಷಾಕ್ಕೆ ಮಲಸವಾರಿ ದೇವಸ್ಥಾನದ ತಿರುವಿನಲ್ಲಿ ವೇಗವಾಗಿ ಬಂದ ಸ್ವಿಫ್ಟ್ ಕಾರೊಂದು ಡಿಕ್ಕಿ ಹೊಡೆದಿದೆ . ಡಿಕ್ಕಿಯ ತೀವ್ರತೆಗೆ ಸುರೇಶ್ ಹಾಗೂ ರಾಜು ಮರಕಾಲ ಪಿಕಪ್ ಒಳಗಡೆ ಸಿಲುಕಿ ಹಾಕಿಕೊಂಡಿದ್ದರು . ಅವರನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಟ್ಟಿದ್ದಾರೆ . ಆದರೆ ಗಂಭೀರ ಗಾಯಗೊಂಡಿದ್ದ ಸುರೇಶ್ ಮರಕಾಲ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ದಾರಿಮಧ್ಯೆ ಸಾವನ್ನಪ್ಪಿದ್ದಾರೆ.

ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo