Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಉಡುಪಿ:- ಹಸುವಿನ ನಾಡಗೀತೆ ಪ್ರೇಮಕ್ಕೆ ನೆಟ್ಟಿಗರು ಫಿದಾ 4-12-2021

ಉಡುಪಿ :  ರಾಷ್ಟ್ರಗೀತೆ, ನಾಡಗೀತೆಗೆ ಕೇಳಿದ್ರ ನಾವೆಲ್ಲ ಸಾಮಾನ್ಯವಾಗಿ ಎದ್ದು ನಿಂತು ಗೌರವ ಸೂಚಿಸ್ತೇವೆ. ಆದರೆ ವಿಶೇಷ ಎಂಬಂತೆ  ನಿಯಮ ಗೊತ್ತಿಲ್ಲದ ಹಸುವೊಂದು ನಾಡಗೀತೆ ಕೇಳಿದ ತಕ್ಷಣ ಕೊಂಚವೂ ಅಲುಗಾಡದೆ ನಿಂತು ಗೌರವ ತೋರಿದೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಬೈಂದೂರು ವಲಯದ ಮಾವಿನಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಶಾಲಾ ವಿದ್ಯಾರ್ಥಿಗಳು ಮುಂಜಾನೆ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ ಹಸು ಶಾಲಾ ಆವರಣದೊಳಗೆ ಬಂದಿದೆ. ವಿದ್ಯಾರ್ಥಿಗಳು ಸಾಮೂಹಿಕವಾಗಿ ನಾಡಗೀತೆ ಹಾಡುವಾಗ ಶಿಸ್ತಿನಲ್ಲಿ ಹಸು ಒಂದೇ ಕಡೆ ನಿಂತಿದೆ.
ಅದರಲ್ಲಿಯೂ ಈ ಹಸುವಿನ ವಿಶೇಷವೆಂದರೆ ನಾಡಗೀತೆ ಮುಗಿಯುವವರೆಗೂ ಕದಲದೆ ನಿಂತಲ್ಲೆ ನಿಂತಿದ್ದು, ನಂತರ ಹುಲ್ಲು ಅರಸುತ್ತಾ ಹೋಗಿದೆ. ನಾಡಗೀತೆಗೆ ಹಸು ಪ್ರತಿಕ್ರಿಯಿಸಿದ ಈ ವಿಶೇಷ ದೃಶ್ಯವನ್ನು ಶಿಕ್ಷಕರೊಬ್ಬರು ಸೆರೆ ಹಿಡಿದಿದ್ದಾರೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo