ಎಂ.ಇ.ಎಸ್. ನಿಷೇಧಕ್ಕೆ ಒತ್ತಾಯಿಸಿ ಕರ್ನಾಟಕ ಬಂದ್‌ಗೆ ಕನ್ನಡ ಪರ ಸಂಘಟನೆಗಳು ಕರೆ ನೀಡಿವೆ. ಡಿಸೆಂಬರ್ 31 ರಂದು ಕರ್ನಾಟಕ ಬಂದ್ ನಡೆಯಲಿದೆ ಎಂದು ಹೋರಾಟಗಾರ ವಾಟಾಳ್ ನಾಗರಾಜ್ ಕೆರೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಇದು ಕನ್ನಡಿಗರ ಬಂದ್ ನಾವು ಯಾವುದೇ ಸಂಘಟನೆಗಳನ್ನು ಬಂದ್ ಮಾಡಲು ಕೋರುವುದಿಲ್ಲ, ಅವರೇ ಸ್ವಯಂಪ್ರೇರಿತ ರಾಗಿ ಬಂದ್ ನಡೆಸುತ್ತಾರೆ ಎಂದು ಹೇಳಿದ್ದಾರೆ. ೩೦ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿವೆ.ಬೆಳಿಗ್ಗೆ ೬ರಿಂದ ಸಂಜೆ ೬ಗಂಟೆಯವರೆಗೆ ಬಂದ್ ಇರಲಿದೆ ಎಂದಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ