ಉಡುಪಿ : ಉಡುಪಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಿಜಾಬ್ ಧರಿಸಿ ಬರುತ್ತಿರುವ ಆರು ಜನ ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿ ಒಳಗಡೆ ಪ್ರವೇಶ ನಿರಾಕರಿಸಿದ ಆರೋಪ ಕೇಳಿ ಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಇನ್ನು ಕಾಲೇಜಿನ ಆವರಣದಲ್ಲಿ ಅವರ ಮಾತೃಭಾಷೆ ಉರ್ದು, ಬ್ಯಾರಿ ಮಾತನಾಡುವಂತಿಲ್ಲ. ಒಬ್ಬರಿಗೊಬ್ಬರು ಸಲಾಂ ಮಾಡುವಂತಿಲ್ಲ ಎಂದು ತರಗತಿಯ ಉಪನ್ಯಾಸಕ ಹೇಳಿದ್ದಾರೆಂದು ವಿಧ್ಯಾರ್ಥಿನಿಯರು
ಉಪನ್ಯಾಸಕನ ವಿರುದ್ಧ ದೂರಿದ್ದಾರೆ.
ಇನ್ನು ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತಿದ್ದು ಕಳೆದ ನಾಲ್ಕು ದಿನಗಳಿಂದ ನಮ್ಮನ್ನು ತರಗತಿಗೆ ತೆಗೆದುಕೊಳ್ಳುತಿಲ್ಲ. ಹಾಜರಾತಿ ನೀಡುತ್ತಿಲ್ಲ. ನಮಗೆ ನಮ್ಮ ಹಕ್ಕು ಕೊಟ್ಟರೆ ಸಾಕು
ಎನ್ನುವ ಮಾತುಗಳು ಕೇಳಿಬಂದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ರಂಗದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ