Slider

ಕೋಟ:-ಮೆಹಂದಿ ಕಾರ್ಯಕ್ರಮದಲ್ಲಿ ಹಲ್ಲೆ ಪ್ರಕರಣ: ಯುವಕನ ಮದುವೆಗೆ ಹಾಜರಾಗಿ ಧೈರ್ಯ ತುಂಬಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ30-12-2021

ಕುಮಟ : ಉಡುಪಿ ಜಿಲ್ಲೆಯ ಕೋಟಾ ಹೋಬಳಿಯ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗರ ಕೇರಿಯ ಯುವಕನ ಮೆಹಂದಿ ಕಾರ್ಯಕ್ರಮಕ್ಕೆ ಪೋಲಿಸರು ಅಡ್ಡಿ ಪಡಿಸಿದ್ದು ಆ ಯುವಕನ ಮದುವೆ  ಉತ್ತರ.ಕನ್ನಡದ ಕುಮಟದಲ್ಲಿ ನಿನ್ನೆ(ಬುಧವಾರ) ನಡೆಯಿತು.
ಪೋಲಿಸರ ಲಾಠಿ ಪ್ರಹಾರಕ್ಕೆ ಒಳಗಾದ ಯುವಕನ ಮದುವೆ ಸಮಾರಂಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭಾಗಿಯಾಗಿದ್ದರು. ಈ ಕೇರಿಯನ್ನು ಹತ್ತಿರದಿಂದ ಕಂಡಿದ್ದು, ಅವರೆಲ್ಲರ ಆತ್ಮೀಯತೆಯನ್ನು ನಾನು ಗಳಿಸಿದ್ದೇನೆ. 

ಈ ವೇಳೆ ನನ್ನೂರು ಕೋಟಾ ಭಾಗದಲ್ಲಿ ಇರುವಂತಹ ಏಕೈಕ ಕೊರಗರ ಕೇರಿ ಇದಾಗಿದ್ದು, ಈ ಮುಗ್ಧ ಜನರ ಮೇಲೆ ಹಲ್ಲೆ ನಡೆದದ್ದು ನೋವಿನ ಸಂಗತಿ ಎಂದರು. ಇಂದು ಸಚಿವರು ಸಂತ್ರಸ್ಥ ಕುಟುಂಬದವರ ಮನೆಗೆ ಭೇಟಿ ನೀಡಿ ಸಾಂತ್ವನ ಮಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo