Slider

ಕೋಟ :-ಮೆಹಂದಿ ಕಾರ್ಯಕ್ರಮದಲ್ಲಿ ಹಲ್ಲೆ ಪ್ರಕರಣ; ಪೊಲೀಸರಿಂದ ಪ್ರತಿ ದೂರು ದಾಖಲು.30-12-2021

ಕೋಟ :-ಮೆಹಂದಿ ಕಾರ್ಯಕ್ರಮದಲ್ಲಿ ಹಲ್ಲೆ ಪ್ರಕರಣ; ಪೊಲೀಸರಿಂದ ಪ್ರತಿ ದೂರು ದಾಖಲು.

ಕೋಟತಟ್ಟು ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರಿಂದ ಪ್ರತಿದೂರು ಸಲ್ಲಿಸಲಾಗಿದೆ.

ಜಯರಾಮ ನಾಯ್ಕ ಎಲ್‌ ಕೋಟ ಪೊಲೀಸ್‌‌ ಠಾಣೆಯಲ್ಲಿ ಕಾನ್ಸ್‌‌ಟೇಬಲ್‌‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಈ ವೇಳೆ ಠಾಣಾ ಪೊಲೀಸ್‌‌ ಉಪನಿರೀಕ್ಷಕ ಸಂತೋಷ್‌‌ ಬಿ ಪಿ ಅವರು ರಾತ್ರಿ 10.45ರ ಸುಮಾರಿಗೆ ಕರೆ ಮಾಡಿ ಕೋಟತಟ್ಟು ಗ್ರಾಮದ ಚಿಟ್ಟಿಬೆಟ್ಟುವಿನ ರಾಜೇಶ್ ಎನ್ನುವವರ ಮನೆಯಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಏರು ಧ್ವನಿಯಲ್ಲಿ ಡಿಜೆ ಸೌಂಡ್ ಹಾಕಿ, ಮನೆಯ ಎದುರಿನ ಸಾರ್ವಜನಿಕ ರಸ್ತೆಯಲ್ಲಿ ಸುಮಾರು 30-50 ಜನ ಮಧ್ಯ ಸೇವನೆ ಮಾಡಿ ಕೇಕೆ ಹಾಕುತ್ತಾ, ನೃತ್ಯ ಮಾಡುತ್ತಿದ್ದಾರೆ ಎಂದು ತಿಳಿಸಿದ್ಧಾರೆ.

ಈ ವೇಳೆ ಕಾನ್ಸ್ಟೇಬಲ್ ಜಯರಾಂ ನಾಯಕ್ ಪೊಲೀಸ್ ಜೀಪಿನಲ್ಲಿ ಪಿಎಸ್‌‌ಐ ಸಂತೋಷ್ ಅವರೊಂದಿಗೆ ರಾತ್ರಿ ಸುಮಾರಿಗೆ ಸ್ಥಳಕ್ಕೆ ಹೋದಾಗ ರಾಜೇಶ್, ಸುದರ್ಶನ್, ಗಣೇಶ ಬಾರ್ಕೂರು, ಸಚಿನ್, ಗಿರೀಶ್, ನಾಗೇಂದ್ರ ಪುತ್ರನ್, ನಾಗರಾಜ ಪುತ್ರನ್ ಮತ್ತು ಇತರರು ಡಿಜೆ ಸೌಂಡ್ ಅನ್ನು ಜೋರಾಗಿ ಹಾಕಿಕೊಂಡು ನೃತ್ಯ ಮಾಡುತ್ತಿರುವುದು ಕಂಡು ಬಂದಿದೆ.

ಈ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ಸುಬ್ರಹ್ಮಣ್ಯ ಉರಾಳ ಅವರು ಪಿಎಸ್‌ ಅವರಲ್ಲಿ ತನ್ನ ತಾಯಿಗೆ ಹೃದಯ ಸಂಬಂಧಿ ತೊಂದರೆ ಇದ್ದು, ಡಿಜೆ ಸೌಂಡನ್ನು ಮೆಲ್ಲನೆ ಇಡುವಂತೆ 112 ಗೆ ಮಾಹಿತಿ ನೀಡಿದ್ದು, 112 ಸಿಬ್ಬಂದಿಯವರು ಸ್ಥಳಕ್ಕೆ ಬಂದಾಗ ಅವರಲ್ಲಿಯೂ ಸಹ ಆರೋಪಿತರು ಉಡಾಫೆಯಿಂದ ಮಾತನಾಡಿದ್ಧಾರೆ ಎಂದಿದ್ಧಾರೆ.

ಈ ವೇಳೆ ಪಿಎಸ್‌ಐ ಅವರು ಡಿಜೆ ಸೌಂಡನ್ನು ಕಡಿಮೆ ಮಾಡುವಂತೆ ತಿಳಿಸಿದಾಗ, ಆರೋಪಿತರು ಗುಂಪು ಕಟ್ಟಿಕೊಂಡು, ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಪಿಎಸ್‌ಐ ಅವರ ಬಳಿ ಬಂದು, ನೀವು ಏನು ಮಾಡುತ್ತೀರಾ ನಾವು ಡಿಜೆ ಸೌಂಡನ್ನು ಬಂದ್‌ ಮಾಡುವುದಿಲ್ಲ ಎಂದು ಉಡಾಫೆಯಿಂದ ಮಾತನಾಡಿ, ಸಮವಸ್ತ್ರದಲ್ಲಿದ್ದ ಪಿಎಸ್ಐ ಅವರನ್ನು ದೂಡಿದ್ದಾರೆ. ಈ ವೇಳೆ ಜಯರಾಮ ನಾಯ್ಕ ಅವರು ಡಿಜೆ ಅನ್ನು ಬಂದ್‌ ಮಾಡಲು ಹೋದಾಗ ಆರೋಪಿತರು ಜಯರಾಮ ನಾಯ್ಕ ಅವರನ್ನು ಸುತ್ತುವರಿದು ದೊಣ್ಣೆಯಿಂದ ಕೈಗೆ ಹೊಡೆದು, ಸಮವಸ್ತ್ರವನ್ನು ಹರಿದು ಹಾಕಿ ಅವಾಚ್ಯವಾಗಿ ಬೈದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ಧಾರೆ ಎಂದು ಪೊಲೀಸ್‌ ಸಿಬ್ಬಂದಿ ಕೋಟ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo