ತಂಪು ಪಾನೀಯಗಳನ್ನು ಕೊಂಡೊಯ್ಯುತ್ತಿದ್ದ ತ್ರಿಚಕ್ರ ರಿಕ್ಷಾ ಒಂದಕ್ಕೆ ಏಕಾಏಕಿಯಾಗಿ ಬಂದ ಲಾರಿ ಢಿಕ್ಕಿ ಹೊಡೆದಿದೆ, ಈ ವೇಳೆ ಅಲ್ಲೇ ಹೋಗುತ್ತಿದ್ದ ಸ್ಕೂಟಿ ಸವಾರರಿಗೂ ಆ ಲಾರಿ ಢಿಕ್ಕಿ ಹೊಡೆದಿದ್ದು, ಲಾರಿ ಢಿಕ್ಕಿ ಹೊಡೆದ ರಭಸಕ್ಕೆ ರಿಕ್ಷಾ ಮತ್ತು ಸ್ಕೂಟಿ ಜಖಂಗೊಂಡಿದೆ.
ಘಟನೆಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಢಿಕ್ಕಿ ಹೊಡೆದ ಲಾರಿ ಕೇರಳ ಮೂಲದೆಂದು ತಿಳಿದುಬಂದಿದ್ದು, ಲಾರಿಯನ್ನು ಸ್ಥಳೀಯರು ಸ್ವಲ್ಪ ದೂರದ ತನಕ ಹಿಂಬಾಲಿಸಿದ್ದಾರೆ, ಆದರೂ ಲಾರಿ ಚಾಲಕ ನಿಲ್ಲಿಸಿದೆ ಪರಾರಿಯಾಗಿದ್ದಾನೆ.
ಸದ್ಯ ಲಾರಿ ಚಾಲಕನಿಗೆ ಶೋಧ ಮುಂದುವರಿದಿದ್ದು, ಘಟನಾ ಸ್ಥಳಕ್ಕೆ ಕೋಟ ಆರಕ್ಷಕ ಠಾಣಾ ಸಿಬ್ಬಂದಿಗಳು ಆಗಮಿಸಿದ್ದು, ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ