ಕೊರೊನಾ ಸಂಕಷ್ಟ ಕಾಲದಲ್ಲಿ ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಿದ್ದು, ಬಹುತೇಕ ಉದ್ಯಮಗಳು ದಿವಾಳಿಯಾಗಿದೆ. ಹೀಗಾಗಿ ಸರ್ಕಾರದ ಆದಾಯ ಕೂಡ ತೀವ್ರವಾಗಿ ಕುಸಿದಿತ್ತು. ಆದರೆ, ಈ ಸಂದರ್ಭದಲ್ಲಿ ಸರ್ಕಾರದ ಕೈಯನ್ನು ಹಿಡಿದಿದ್ದು ಮಾತ್ರ ಮದ್ಯಪ್ರಿಯರು.
ಕಳೆದ ಮೂರು ವರ್ಷಗಳಲ್ಲಿ ರಾಜ್ಯ ಸರ್ಕಾರಕ್ಕೆ ಅಬಕಾರಿ ಇಲಾಖೆಯಿಂದ 64,859.98 ಕೋಟಿ ರೂಪಾಯಿ ರಾಜಸ್ವ ಸಂಗ್ರಹವಾಗಿದೆ. ಅದರಲ್ಲಿಯೂ ಕೊರೊನಾ ಸಂಕಷ್ಟ ಕಾಲದ ಸಮಯದಲ್ಲಿಯೇ ಎಣ್ಣೆ ಪ್ರಿಯರೂ ಹೆಚ್ಚಾಗಿ ಮದ್ಯ ಖರೀದಿಸಿದ್ದಾರೆ ಇದು ಅಂಕಿ – ಸಂಖ್ಯೆಯಿಂದ ಬಹಿರಂಗವಾಗುತ್ತಿದೆ.
ಸರ್ಕಾರ ಹಾಗೂ ಅಬಕಾರಿ ಇಲಾಖೆಯ ಅಂಕಿ ಅಂಶದ ಪ್ರಕಾರ 2020-21ರಲ್ಲಿ 23,332.10 ಕೋಟಿ ರೂಪಾಯಿ, 2019-20ರಲ್ಲಿ 21,589.95 ಕೋಟಿ ರೂಪಾಯಿ ಹಾಗೂ 2018-29ರಲ್ಲಿ 19,943.93 ಕೋಟಿ ರಾಜಸ್ವ ಸಂಗ್ರಹವಾಗಿದೆ.
ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಕೈ ಹಿಡಿದು ನಡೆಸಿದ್ದು ಮಾತ್ರ ಮದ್ಯ ಪ್ರಿಯರು.ಸದ್ಯ ಅಬಕಾರಿ ಇಲಾಖೆ ರಾಜಸ್ವ ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆದಾಯ ನೀಡುತ್ತಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ