ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ದರೋಡೆಕೋರರು, ಕಳ್ಳಕಾಕರನ್ನು ಹಿಡಿದು ಸಿಂಗಂ ಆಗಬೇಕು, ಹೊರತು ಅಮಾಯಕರನ್ನು ಹೊಡೆದು ಸಿಂಗಂ ಆಗಬೇಡಿ ಎಂದು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿಯವರು ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ಕೋಟ ತೊಟ್ಟು ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸರ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಕೊರಗ ಸಮುದಾಯದವರು ಅತ್ಯಂತ ಮುಗ್ಧರು. ಅವರು ಯಾವುದೇ ಸುಳ್ಳು ಕೇಸು ಹಾಕುವ ಜನರಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ ಇರುವ ಮಂದಿ. ಅಂತವರ ಮೇಲೆ ಇಲಾಖೆಯವರು ಹಲ್ಲೆ ನಡೆಸಿದ್ದು ನಿಜಕ್ಕೂ ನೋವುಂಟು ಮಾಡಿದ್ದು ವ್ಯವಸ್ಥೆ ಬಗ್ಗೆ ಕ್ಷಮೆ ಕೇಳುವೆ. ಈ ಪಿಎಸ್‌ಐ ಬಗ್ಗೆ ಹಲವು ದೂರುಗಳು ಕೇಳಿಬರುತ್ತಿದೆ. ಅಂತವರು ಇಲ್ಲಿರಲು ಸಾಧ್ಯವಿಲ್ಲ. . ಒಂದೊಮ್ಮೆ ಪಿಎಸ್‌ಐ ಮೆಹೆಂದಿ ಕಾರ್ಯಕ್ರಮಕ್ಕೆ ಬರುವಾಗ ಇಲ್ಲೇನಾದರೂ ತಪ್ಪುಕಂಡುಬಂದಿದ್ದರೆ ತಿಳಿಹೇಳಬಹುದಿತ್ತು ಅಥವಾ ನೋಟಿಸ್ ಮಾಡಬಹುದಿತ್ತು. ಅದೆಲ್ಲವನ್ನೂ ಬಿಟ್ಟು ಒಬ್ಬ ಸರಕಾರಿ ಅಧಿಕಾರಿಯಾಗಿ ದುರ್ವರ್ತನೆ ತೋರಿರುವುದು ಸರಿಯಲ್ಲ ಎಂದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ