ಉಡುಪಿ:-ಪತಿರಾಯನ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ನಡ್ಸಾಲು ಗ್ರಾಮದಲ್ಲಿ ನಡೆದಿದೆ.
ಪ್ರಮಿಳಾ (೪೦) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ.
ಪತಿ ಭಾಸ್ಕರ್ ಶೆಟ್ಟಿ ಪ್ರತಿನಿತ್ಯ ಕುಡಿದು ಬಂದು ಪತ್ನಿ ಪ್ರಮೀಳಾಗೆ ಮಾನಸಿಕವಾಗಿ ಹಿಂಸೆ ನೀಡಿ ದೈಹಿಕವಾಗಿ ಹಲ್ಲೆ ನಡುಸುತ್ತಾಇದ್ದ ಎಂದು ಆರೋಪಿಸಲಾಗಿದೆ.
ಪತ್ನಿ ಹಾಗೂ ಮಗ ರಾತ್ರಿ ಊಟ ಮಾಡುತ್ತಿದ್ದ ವೇಳೆ, ಕುಡಿದು ಬಂದ ಗಂಡ ಮಗನಿಗೆ ಮದ್ಯ ಸೇವಿಸುವಂತೆ ಒತ್ತಾಯಿಸುತ್ತಿದ್ದ ಇದಕ್ಕೆ ತಾಯಿ ಆಕ್ಷೇಪಿಸಿದಾಗ ಪತ್ನಿಗೆ ಬೆತ್ತದಿಂದ ಹೊಡೆದು ತುಳಿದು ಹಲ್ಲೆ ನಡೆಸಿದ್ದಾನೆ.
ಗಂಡನ ಕಿರುಕುಳ ತಾಳಲಾರದೇ ಪತ್ನಿ ನಿದ್ರೆ ಮಾತ್ರೆ ಸೇವಿಸಿ ಅತ್ಮಹತ್ಯೆ ಗೆ ಯತ್ನಿಸಿದ್ದಾಳೆ.ಇದನ್ನು ಗಮನಿಸಿದ ತಾಯಿ ಪ್ರಮಿಳಾ ಅವರನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ