Slider

ಉಡುಪಿ:-ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಕಿಣಿ ರಾಜೀನಾಮೆ.29-12-2021

ಉಡುಪಿ:-ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಕಿಣಿ ರಾಜೀನಾಮೆ.

ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಕಿಣಿ ಅವರು ರಾಜೀನಾಮೆ ನೀಡಿದ್ದು, ರಾಜಿನಾಮೆ ಪತ್ರವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಫೇಸ್ಬುಕ್ ‌ನಲ್ಲಿ ಬೆರೆದುಕೊಂಡಿರುವ ಅವರು " ಆತ್ಮೀಯರೇ
ಭಾರತೀಯ ಜನತಾ ಪಕ್ಷದ ಆದೇಶದಂತೆ ಒಬ್ಬ ಅತ್ಯಂತ ಸಾಮಾನ್ಯ ಪಕ್ಷದ ಕಾರ್ಯಕರ್ತನಾಗಿ 18 ತಿಂಗಳು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸಾಧ್ಯವಾದಷ್ಟು ಮಟ್ಟಿಗೆ ಹೊಸತನವನ್ನು ನೀಡಿ ಪಾರದರ್ಶಕತೆಯಿಂದ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ನಮ್ಮ ಆಡಳಿತ ಕೆಲಸ ಮಾಡಿದೆ.ಇದೀಗ ಪಕ್ಷದ ಹಿರಿಯರ ಆದೇಶದಂತೆ ರಾಜೀನಾಮೆ ನೀಡಿದ್ದೇನೆ." ಎಂದು ಬರೆದುಕೊಂಡಿದ್ದಾರೆ.

ಇನ್ನು ಸಹಕರಿಸಿದ ಉಡುಪಿ ಶಾಸಕರಾದ ರಘುಪತಿ ಭಟ್ ಮತ್ತು ಕಾಪು ಶಾಸಕರಾದ ಲಾಲಾಜಿ ಮೆಂಡನ್ ಇವರಿಗೆ, ಪ್ರಾಧಿಕಾರದ ಗೌರವಾನ್ವಿತ ಸದಸ್ಯರುಗಳಿಗೆ,, ಸಿಬ್ಬಂದಿ ವರ್ಗ, ಜನತೆಯ ಸೇವೆ ಅವಕಾಶ ನೀಡಿದ ಪಕ್ಷದ ಹಿರಿಯರಿಗೆ ಮತ್ತು ಜನತೆಗೆ ಧನ್ಯವಾದಗಳು ತಿಳಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo