Slider

ಉಡುಪಿ:-ಮತಾಂತರ ನಿಷೇಧ ವಿರೋಧಿಸುವುದರ ಹಿಂದೆ ಹಿಡನ್ ಅಜೆಂಡಾ-ಸಚಿವ ಸುನಿಲ್ ಕುಮಾರ್ ಹೇಳಿಕೆ.28-12-2021

ಮತಾಂತರ ನಿಷೇಧ ಕಾನೂನನ್ನು ವಿರೋಧಿಸುವವರು ತಮ್ಮದೇ ಆದ ಹಿಡನ್ ಅಜೆಂಡಾ ಹೊಂದಿದ್ದಾರೆ ಎಂದು ಇಂಧನ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಮತಾಂತರಗೊಳ್ಳದವನು ಏಕೆ ಚಿಂತಿಸಬೇಕು ? ಹಿಂದೂಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುತ್ತಾರೆ ಎಂದು ಈ ಕಾನೂನನ್ನು ಜಾರಿಗೆಗೊಳಿಸಲಾಗಿಲ್ಲ, ಯಾರೂ ತಮ್ಮ ಧರ್ಮಕ್ಕೆ ಮತಾಂತರಗೊಳ್ಳಲು ಆಮಿಷ ಒಡ್ಡಬಾರದು ಎಂದರು.

ಇದು ಕ್ರಿಶ್ಚಿಯನ್ ಮಿಷನರಿಗಳನ್ನು ಗುರಿಯಾಗಿಸಿಕೊಂಡು ಮಾಡಿದ ಕಾನೂನಲ್ಲ . ದೀನದಲಿತರ ರಕ್ಷಣೆಗೆ ಇದು ಕಾನೂನು . ಕ್ರೈಸ್ತ ಮಿಷನರಿಗಳ ಸಮಾಜ ಸೇವೆಯ ಹಿಂದೆ ಏನಾದರೂ ಉದ್ದೇಶವಿದೆಯೇ ? ಎಂದು ಪ್ರಶ್ನಿಸಿದರು.

ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo