ಕೋಟ: ಕೋಟ ಹೋಬಳಿಯ ಕೋಟತಟ್ಟು ಗ್ರಾಮದ ಕೊರಗ ಸಮುದಾಯದ ಕುಟುಂಬದ ಮೆಹೆಂದಿ ಕಾರ್ಯಕ್ರಮ ನಡೆಯುವ ವೇಳೆ ಪೋಲಿಸರು ಲಾಠಿಚಾರ್ಜ್ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐ ಸೇರಿ ಆರು ಪೊಲೀಸ್ ಸಿಬ್ಬಂದಿಗಳನ್ನು ಸ್ಥಳಾಂತರ ಮಾಡಲಾಗಿದೆ.
ಇದರೊಂದಿಗೆ ಡಿಎಸ್ಪಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿರುವುದಾಗಿ ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ಪೊಲೀಸರು ಮದುವೆ ಮನೆಗೆ ಆಗಮಿಸಿ ಡಿಜೆಯನ್ನು ಸ್ಥಗಿತಗೊಳಿಸಲು ತಿಳಿಸಿದರು. ಆದರೆ ಅಲ್ಲಿ ಗಟ್ಟಿಯಾದ ಮ್ಯೂಸಿಕ್ ಮುಂದುವರಿದಿತ್ತು ಎಂಬ ಮಾತನ್ನು ಪೊಲೀಸ್ ವರಿಷ್ಠಾಧಿಕಾರಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇ ಘಟನೆಯ ಕುರಿತು ತನಿಖೆ ಮುಂದುವರಿಯುವರೆಗೂ ಅವರನ್ನು ಕರ್ತವ್ಯಕ್ಕೆ ನಿಯೋಗಿಸುವುದಿಲ್ಲ ಎಂದು ತಿಳಿಸಿದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ