Slider

ಮಲ್ಪೆ:-ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿ ಸಾವು28-12-2021

ಮಲ್ಪೆ: ಜಿಲ್ಲೆಯ  ಮಲ್ಪೆ ಬಂದರಿನಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ  ನೀರಿಗೆ ಬಿದ್ದು ಮೃತಪಟ್ಟ ಘಟನೆ ನಡೆದು ಬಂದಿದೆ. ಮೃತನ ಪೈಕಿ  ಛತ್ತಿಸ್ ಗಢ ಮೂಲದ ರಾಜ್ ಕುಮಾರ ಯಾದವ್ ( 34 ) ಮೃತಪಟ್ಟವರು ಎಂದು ತಿಳಿದುಬಂದಿದೆ.

ಇನ್ನು ಈ ಘಟನೆಗೆ ಸಂಬಂಧಿಸಿದಂತೆ ಮೀನುಗಾರಿಕೆಗಾಗಿ ಮಲ್ಪೆಗೆ ಬಂದಿದ್ದ ಇವರು , ಬೇರೆ ಬೇರೆ ಬೋಟ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ರಾಹುಕ್ ಪೈಂಕಾರ ಅವರು ಕೆಲಸ ಮಾಡುತ್ತಿದ್ದ ಬೋಟ್ ನ ಹತ್ತಿರ ಬಂದು ತನಗೆ ಕೆಲಸ ಇರುವುದಿಲ್ಲ ಎಂದು ತಿಳಿಸಿ ಮರಳಿದ್ದರು. 
ನಂತರ ರಾಜ್ ಕುಮಾರ ಯಾದವ್ ಮೃತ ದೇಹ ಕೊಡವೂರಿನ ಬಾಪುತೋಟ ಬಂದರಿನ ಟಿ- ಧಕ್ಕೆಯ ನೀರಿನಲ್ಲಿ ಪತ್ತೆಯಾಗಿದೆ .

ರಾಹುಕ್ ಪೈಂಕಾರ ಅವರ ದೂರಿನಂತೆ ರಾಜ್ ಕುಮಾರ ಯಾದವ್ ರವರು ಡಿಸೆಂಬರ್.12 ರಿಂದ ಡಿಸೆಂಬರ್. 27 ರ ನಡುವೆ ಮೀನುಗಾರಿಕ ಬೋಟಿನಲ್ಲಿ ಮಲಗಿದ್ದವರು ಆಕಸ್ಮಿಕವಾಗಿ ಧಕ್ಕೆ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.

ರಾಹುಲ್ ಪೈಂಕಾರ ಕೊಟ್ಟ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ .
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo