40 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಭಾವಿತರಾಗಿದ್ದಾರೆ ಎಂದ ಅವರು, ಜೀನ್ಸ್‌ನ್ನ ಧರಿಸುವ ಹುಡುಗಿಯರು ಅವರಿಂದ ಪ್ರಭಾವಿತರಾಗುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್‌ನ ಜನಜಾಗರಣ್ ಅಭಿಯಾನದ ಸಂದರ್ಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ದಿಗ್ವಿಜಯ್ ಸಿಂಗ್, “ಜೀನ್ಸ್ ಧರಿಸುವ ಮತ್ತು ಮೊಬೈಲ್ ಬಳಸುವ ಹುಡುಗಿಯರು ಪ್ರಧಾನಿ ಮೋದಿಯನ್ನು ಇಷ್ಟಪಡುವುದಿಲ್ಲ ಎಂದು ಹೇಳಿದರು. 40-50 ವರ್ಷ ವಯಸ್ಸಿನ ಮಹಿಳೆಯರನ್ನೇ ಪ್ರಧಾನಿ ಮೋದಿ ಪ್ರಭಾವಿತರಾಗುವಂತೆ ಮಾಡುತ್ತಾರೆ, ಆ ಮಹಿಳೆಯರೇ ಪ್ರಧಾನಿ ಮೋದಿಯವರೆಡೆಗೆ ಪ್ರಭಾವಿತರಾಗುತ್ತಾರೆ ಹೊರತು ಜೀನ್ಸ್ ತೊಡುವ, ಮೊಬೈಲ್ ಬಳಸುವ ಯುವತಿಯರಲ್ಲ” ಎಂದಿದ್ದಾರೆ.
ಸದ್ಯ ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆ ಭಾರಿ ವಿವಾದ ಹುಟ್ಟುಹಾಕಿದ್ದು, ಇದು ಕಾಂಗ್ರೆಸ್ ಮಹಿಳೆಯರಿಗೆ ಕೊಡುವ ಗೌರವ ಎಂದು ಬಿ.ಜೆ.ಪಿ. ಟೀಕಿಸಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ