ಉಡುಪಿ : ಕ್ರೀಡಾ ಭಾರತಿ ಇವರ ಆಶ್ರಯದಲ್ಲಿ 2022 ರ ಜನವರಿ 2 ರಂದು ಭಾನುವಾರ ಬೆಳಿಗ್ಗೆ ಅಜ್ಜರಕಾಡು ಉಡುಪಿ ಜಿಲ್ಲಾ ಕ್ರೀಡಾಂಗಣದಲ್ಲಿ "ಪ್ರಥಮ ಜಿಲ್ಲಾ ಕ್ರೀಡಾ ಸಮ್ಮೇಳನ 2021" ನಡೆಯಲಿದೆ.
ಈ ಸಂಬಂಧ ಮಾಹಿತಿ ನೀಡಿದ ಆಯೋಜಕರು ,ಜಿಲ್ಲಾ ಸಮ್ಮೇಳನದಲ್ಲಿ ಉಡುಪಿ ಜಿಲ್ಲೆಯ 21 ಕ್ರೀಡಾ ಸಂಘಟನೆಗಳು ಭಾಗಿಯಾಗಲಿವೆ.
2022 ರ ಜಿಲ್ಲಾ ಕ್ರೀಡಾ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ರಘುಪತಿ ಭಟ್, ಅಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಕಾರ್ಯಾಧ್ಯಕ್ಷ ಮಹೇಶ್ ಠಾಕೂರ್, ಯುವಜನ ಸೇವಾ ಕ್ರೀಡಾ ಇಲಾಖೆ, ಸಹಾಯಕ ನಿರ್ದೇಶಕರಾದ ರೋಶನ್ ಕುಮಾರ್ ಶೆಟ್ಟಿ ಮುಂದಾಳುತ್ವದಲ್ಲಿ ಕ್ರೀಡಾ ಸಮ್ಮೇಳನ ನಡೆಯಲಿದೆ.
ಇಂತಹ ಸಮ್ಮೇಳನಗಳ ಮೂಲಕ ಸಾಮಾನ್ಯರಲ್ಲೂ ಕ್ರೀಡಾಸಕ್ತಿಯನ್ನು ಬೆಳೆಸುವುದು, ಆ ಮೂಲಕ ಸ್ವಸ್ಥ ಶರೀರ, ಸ್ವ ಮನಸ್ಸುಳ್ಳ, ಸಮಾಜ ನಿರ್ಮಾಣವೇ ಇದರ ಉದ್ದೇಶವಾಗಿದೆ.
ಕ್ರೀಡಾಕೂಟ ಎಂದರೆ ನಗದು ಬಹುಮಾನ, ಟ್ರೋಫಿ, ಪದಕ, ಪ್ರಶಸ್ತಿ, ಸರ್ಟಿಫಿಕೇಟ್ ಇಷ್ಟಕ್ಕೇ ಸೀಮಿತವಾಗಿ ಬಿಟ್ಟಿರುವುದು ಸುಳ್ಳಲ್ಲ. ಈ ಮಾನಸಿಕತೆಯನ್ನು ಬದಲಾಯಿಸಿ, ಎಲ್ಲಾ ವರ್ಗದವರೂ , ಎಲ್ಲ ವಯೋಮಾನದವರೂ, ಸಂತೋಷಕ್ಕಾಗಿ ಸಂಭ್ರಮದಿಂದ ಆಟವಾಡಬೇಕು. ಆಟವಾಡುವ ಸಹಜ ಸ್ವಭಾವ ನಮ್ಮದಾಗಬೇಕು. ಈ ಸಹಜ ಸ್ವಭಾವವನ್ನು ಎಲ್ಲರಲ್ಲೂ ಬೆಳೆಸಬೇಕು. ಈ ಪ್ರಯತ್ನವಾಗಿ ಕ್ರೀಡಾ ಭಾರತಿಯು ಈ ಸಮ್ಮೇಳನ ಹಮ್ಮಿಕೊಂಡಿರುತ್ತದೆ ಎಂದು ಸಂಘಟಕರು ಹೇಳಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ