ಉಡುಪಿ : ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಎಂಬಲ್ಲಿ ಹಾರ್ಡ್ ವೇರ್ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ನಡೆದಿದೆ. ಮುಳ್ಳಿಕಟ್ಟೆಯ ನಿವಾಸಿ ಹರೀಶ್ ಜೋಗಿ ಎಂಬವರಿಗೆ ಸೇರಿರುವ ಬೆನಕ ಹಾರ್ಡ್‌ವೇರ್ ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಕೋಟ್ಯಾಂತರ ರೂಪಾಯಿ ನಷ್ಟವುಂಟಾಗಿದೆ.
ಶನಿವಾರ ರಾತ್ರಿ ಅಂಗಡಿಯೊಳಗಿಂದ ಶೆಟರ್ ಮೂಲಕ ಹೊಗೆ ಬರುತ್ತಿರುವುದನ್ನು ಮಾಲಕರು ಗಮನಿಸಿದ್ದಾರೆ. ನಂತರ ಅಂಗಡಿಯ ಬೀಗ ಒಡೆದು ಶಟರ್ ತೆಗೆಯುವಷ್ಟರಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಕಂಡುಬಂದಿದೆ,
ಅಂಗಡಿಯೊಳಗಿದ್ದ ಪೈಂಟ್, ಟರ್ಪಂಟೈಲ್ ಮೊದಲಾದ ಆಯಿಲ್ ಬೇಸ್ಡ್ ಕಂಟೆಂಟ್ ಗಳು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲೆಗೆ ಹಾರ್ಡ್ ವೇರ್ ಅಂಗಡಿಗೆ ತಾಗಿಕೊಂಡಿದ್ದ ಮೆಡಿಕಲ್ ಶಾಪ್ ಹಾಗೂ ಇತರ ಅಂಗಡಿಗಳಿಗೂ ಹಾನಿಯಾಗಿದೆ. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ,
ಈ ಬಗ್ಗೆ ಗಂಗೊಳ್ಳಿ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ