ಉಳ್ಳಾಲ : ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಬಿಟ್ಟು ಹೋದ 10000 ರೂ. ನಗದನ್ನು ಬಸ್ ಚಾಲಕ ದಿನಕರ್ ಹಾಗೂ ನಿರ್ವಾಹಕ ಅಲ್ತಾಫ್ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರಿಗೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಮಂಗಳೂರು ತಲಪಾಡಿ ರೂಟ್ ನಲ್ಲಿ ಸಂಚರಿಸುವ 42 ರೂಟ್ ನಂಬರ್ ನ ಮಹೇಶ್ ಬಸ್ ರವಿವಾರ ಬೆಳಗ್ಗೆ 10:45 ರ ವೇಳೆಗೆ ತಲಪಾಡಿಯಿಂದ ಮಂಗಳೂರು ಕಡೆ ಸಂಚರಿಸುವಾಗ ತೊಕ್ಕೊಟ್ಟು ಬಳಿ ಬಸ್ ನ ಹಿಂದಿನ ಸೀಟ್ ನಲ್ಲಿ ಬಿದ್ದಿದ್ದ 10000 ರೂ. ನಗದು ನಿರ್ವಾಹಕ ಅಲ್ತಾಫ್ ಅವರಿಗೆ ಸಿಕ್ಕಿದೆ.
ನಗದು ಸಿಕ್ಕಿದ ತಕ್ಷಣ ಅವರು ಮೆನೇಜರ್ ರಂಜಿತ್ ಗೆ ಮಾಹಿತಿ ನೀಡಿದ್ದಾರೆ.
ಮೆನೇಜರ್ ರಂಜಿತ್ ಅವರ ಸೂಚನೆ ಮೇರೆಗೆ ಚಾಲಕ ದಿನಕರ್ ಹಾಗೂ ನಿರ್ವಾಹಕ ಅಲ್ತಾಫ್ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರನ್ನು ಭೇಟಿಯಾಗಿ ಮಾಹಿತಿ ನೀಡಿ 10000 ರೂ. ನಗದು ಹಣವನ್ನು ಒಪ್ಪಿಸಿದ್ದಾರೆ.
ಸುಮಾರು 25 ವರ್ಷಗಳಿಂದ ಬಸ್ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಅಲ್ತಾಫ್ ಅವರು ಈ ಹಿಂದೆ ಬಸ್ ನಲ್ಲಿ ಸಿಕ್ಕಿದ ಮೊಬೈಲ್ ಇನ್ನಿತರ ವಸ್ತುಗಳನ್ನು ಸಂಬಂಧ ಪಟ್ಟ ಪ್ರಯಾಣಿಕರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದರು. ಈ ಒಂದು ಮಾನವೀಯ ಕೆಲಸ ಮಾಡುವುದರ ಮೂಲಕ ಸಮಾಜದ ಇತರ ಜನರಿಗೆ ಮಾದರಿಯಾಗಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ