ಉಡುಪಿ: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ಇದರ 2022-23 ಸಾಲಿನ ಉಡುಪಿ ಜಿಲ್ಲಾಧ್ಯಕ್ಷರಾಗಿ ಅಫ್ಘಾನ್ ಹೂಡೆ ಆಯ್ಕೆಗೊಂಡರು.
ರಾಜ್ಯಾಧ್ಯಕ್ಷರಾದ ಶೆಹಝಾದ್ ಅವರ ನೇತೃತ್ವದಲ್ಲಿ ಜಿಲ್ಲೆಯ ಸರ್ವಸದಸ್ಯರ ಸಮ್ಮುಖದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅವರನ್ನು ಆಯ್ಕೆ ಮಾಡಲಾಯಿತು. ಅಫ್ಘಾನ್ ಕಾನೂನು ಪದವೀಧರನಾಗಿದ್ದು ಪ್ರಸ್ತುತ ಜಾಮಿಯಾ ಮಿಲ್ಲಿಯ ವಿಶ್ವವಿದ್ಯಾಲಯ ದೆಹಲಿಯ ಮಾನವ ಹಕ್ಕು ವಿಭಾಗದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದಾರೆ.
ಇದೇ ಸಂದರ್ಭದಲ್ಲಿ ಹೂಡೆಯ ಘಟಕಾಧ್ಯಕ್ಷರಾಗಿ ಅಸ್ಜದ್ ಹೂಡೆ, ಮಲ್ಪೆಯ ಘಟಕಾಧ್ಯಕ್ಷರಾಗಿ ಅಯಾನ್ ಮಲ್ಪೆ, ಉಡುಪಿಯ ಘಟಕಾಧ್ಯಕ್ಷರಾಗಿ ಅರ್ಬಝ್ ಅವರು ಆಯ್ಕೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ನಾಸೀರ್ ಗುಜ್ಜರ್'ಬೆಟ್ಟು ಉಪಸ್ಥಿತರಿದ್ದರು.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ