Slider

ಬ್ರಹ್ಮಾವರ:-ತಾಯಿ-ಮಗು ನಾಪತ್ತೆ25-12-2021

ಬ್ರಹ್ಮಾವರ: ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದಲ್ಲಿ ತಾಯಿ ಮತ್ತು ಮಗು ನಾಪತ್ತೆಯಾಗಿರುವ ಘಟನೆ ನಡೆದಿದೆ. 

ನಾಪತ್ತೆಯಾದವರ ಕುರಿತು : ಹಾರಾಡಿ ಗ್ರಾಮದ ವೆಂಕಪ್ಪ ಅಮೀನ್ ಕಂಪೌಂಡ್ ನಿವಾಸಿ ಮಾರುತಿ ಆರ್. ಅವರ ಪತ್ನಿ 30 ವರ್ಷದ ಆಶಾ ಆರ್ ಹಾಗೂ ಅವರ ಮಗ ಆರು ವರ್ಷದ ಮನೀಶಾ ನಾಪತ್ತೆಯಾಗಿದ್ದಾರೆ. 

ಮಾರುತಿ ದಂಪತಿ ಕಳೆದ 6 ತಿಂಗಳಿನಿಂದ ಹಾರಾಡಿ ಗ್ರಾಮದ ವೆಂಕಪ್ಪ ಅಮೀನ್ ಕಂಪೌಂಡ್ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದೇ ವರ್ಷದ ನವೆಂಬರ್ 9 ರಂದು ಮಾರುತಿ ಅವರು ತರಕಾರಿ ವ್ಯಾಪಾರದ ನಿಮಿತ್ತ ಮನೆಯಿಂದ ಪೇಟೆಗೆ ಹೋಗಿದ್ದರು.

ಈ ವೇಳೆ ಸಂಜೆ ಮನೆಗೆ ಬಂದು ನೋಡುವಾಗ ಹೆಂಡಿತಿ ಮತ್ತು ಮಗ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕ ಮನೆಗಳಲ್ಲಿ ಹಾಗೂ ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಈವರೆಗೂ ಪತ್ತೆಯಾಗಿರುವುದಿಲ್ಲ. 

 ಈ ಕುರಿತು  ಪತಿ ಮಾರುತಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo