ಉಡುಪಿ:-ಅಕ್ರಮ ದನ ಸಾಗಾಟ- ಆರೋಪಿಗಳು ಎಸ್ಕೇಪ್
ಉಡುಪಿ:-ಕಾರಿನಲ್ಲಿ ಅಕ್ರಮವಾಗಿ ದನವನ್ನು ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿದ ಘಟನೆ ಬೈಂದೂರು ತಾಲೂಕಿನ ಯಡ್ತರೆ ಬಳಿ ನಡೆದಿದೆ.
ನಿನ್ನೆ ತಡರಾತ್ರಿ ಅಕ್ರಮವಾಗಿ ರಿಟ್ಜ್ ಕಾರಿನಲ್ಲಿ ದನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ನಸುಕಿನ ಜಾವ ೨ ಗಂಟೆ ವೇಳೆಗೆ ಪೊಲೀಸರು ಮಾಹಿತಿಯ ಮೇರೆಗೆ ಯಡ್ತರೆ ಜಂಕ್ಷನ್ ಬಳಿ ತಪಾಸಣೆ ನಡೆಸುತ್ತಿದ್ದರು . ಈ ವೇಳೆ ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ಅತೀ ವೇಗವಾಗಿ ಬರುತ್ತಿರುವುದನ್ನು ಗಮನಿಸಿ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿದೆ.
ಆದರೆ ಚಾಲಕ ಕಾರನ್ನು ಯಡ್ತರೆ ಜಂಕ್ಷನ್ ನಿಂದ ಸ್ವಲ್ಪ ಹಿಂದೆಯೇ ನಿಲ್ಲಿಸಿ ಓಡಿಹೋಗಿದ್ದಾರೆ . ಕಾರಿನಲ್ಲಿದ್ದ ಎರಡು ದನಗಳನ್ನು ಪೊಲೀಸರು ರಕ್ಷಿಸಿದ್ದಾರೆ.
ಬೈಂದೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ