Slider

ಉಡುಪಿ:-ಮಟನ್ ಬಿರಿಯಾನಿ ಇಲ್ಲ ಎಂದಿದ್ದಕ್ಕೆ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ..?22-12-2021

ಉಡುಪಿ:-ಮಟನ್ ಬಿರಿಯಾನಿ ಇಲ್ಲ ಎಂದಿದ್ದಕ್ಕೆ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ..?

ಉಡುಪಿ:-ಹೊಸಂಗಡಿ ಪೇಟೆಯ ಹೊಟೇಲ್ ಒಂದರಲ್ಲಿ ಮಟನ್ ಬಿರಿಯಾನಿ ಇಲ್ಲ ಎಂದಿದ್ದಕ್ಕೆ ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ.

ಸಾಧಿಕ್, ಸುನಿಲ್, ಸತೀಶ್ ಆರೋಪಿಗಳಾಗಿದ್ದಾರೆ. ಇವರು ಹೊಸಂಗಡಿಯ ಹೊಟೇಲ್ ಒಂದಕ್ಕೆ ತೆರಳಿ ಮಟನ್ ಬಿರಿಯಾನಿ ಕೇಳಿದ್ದಾರೆ. ಈ ವೇಳೆ ಹೊಟೇಲ್ ಸಿಬ್ಬಂದಿ ಮಟನ್ ಬಿರಿಯಾನಿ ಇಲ್ಲ ಬೇರೆ ಏನು ಬೇಕು ಎಂದಾದಾಗ ಹೊಟೇಲ್ ಸಿಬ್ಬಂದಿಯಾದ ಶಂಭು ಶೆಟ್ಟಿ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಗಲಾಟೆ ತಡೆಯಲು ಬಂದ ಶಂಭು ಶೆಟ್ಟಿ ಅವರ ಹೆಂಡತಿ ಮೇಲೂ ಆರೋಪಿಗಳೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಶಂಭು ಶೆಟ್ಟಿ ಅಮಾವಾಸ್ಯೆ ಬೈಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಸಿದ್ದಾರೆ.

ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo