ಅನುಮಾನ ಹುಟ್ಟಿಸುವಂತಿದೆ ವಿದ್ಯಾರ್ಥಿಗಳ ಧ್ವನಿಯಾಗಬೇಕಿದ್ದ ವಿದ್ಯಾರ್ಥಿ ಸಂಘಟನೆಗಳ ನಡೆ...??
ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿ ತಿಂಗಳುಗಳು ಕಳೆದರೂ ಫಲಿತಾಂಶದಲ್ಲಿ ಉಂಟಾದ ಗೊಂದಲಗಳು ಇದೀಗ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಯಲ್ಲಿ ದೂಡುವಂತೆ ಮಾಡಿದೆ.
ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆಗಳನ್ನು ನಡೆಸುವಲ್ಲಿ ಮಾಡಿದ ಯಡವಟ್ಟಿನ ಸರಮಾಲೆ ಇದೀಗ ಫಲಿತಾಂಶದವರೆಗೂ ಮುಂದುವರಿದಿದೆ .
ನವೆಂಬರ್ ತಿಂಗಳಲ್ಲಿ ಫಲಿತಾಂಶವನ್ನು ಮುಂದೂಡುತ್ತಾ ಕಾಲ ಕಳೆದ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಅಂಗೈಯಲ್ಲೇ ನಕ್ಷತ್ರವನ್ನು ತೊರಿಸುವ ಪ್ರಯತ್ನ ಮಾಡಿತ್ತು. ಅದಾದ ನಂತರ ಕೊನೆಗೂ ಕಾಟಾಚಾರಕ್ಕೆ ಫಲಿತಾಂಶ ಪ್ರಕಟಿಸಿ ಎಡವಟ್ಟು ಯುನಿವರ್ಸಿಟಿ ಎಂದು ವಿದ್ಯಾರ್ಥಿಗಳ ಬಳಿ ನಗೆಪಾಟೀಲಿಗೆ ಗುರಿಯಾಗಿದ್ದ ವಿವಿ , ಫಲಿತಾಂಶ ಪ್ರಕಟವಾಗಿ ತಿಂಗಳುಗಳು ಕಳೆದರೂ ಫಲಿತಾಂಶದಲ್ಲಿ ಮಾಡಿಕೊಂಡ ಪ್ರಮಾದವನ್ನು ಸರಿಮಾಡಿಕೊಳ್ಳಲು ಹಿಂದೇಟು ಹಾಕುತ್ತಿದೆ.
ಕೆಲವು ಕಾಲೇಜಿನ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಮಾರ್ಕ್‌ಗಳನ್ನೇ ನಮೂದು ಮಾಡಿದೆ
ಪ್ರಶ್ನಾರ್ಥಕ ಚಿಹ್ನೆ ನೀಡಿದೆ. ಇನ್ನು ಕೆಲವು ವಿದ್ಯಾರ್ಥಿಗಳಿಗೆ ಕೊಡಮಾಡುವ ಅಂಕಗಳಲ್ಲಿ ಕೆಲವರಿಗೆ ಕಡಿಮೆ, ಕೆಲವರನ್ನು ಅನುತ್ತೀರ್ಣ ಮಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದು ಬಹಳಷ್ಟು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತ ಮಂಗಳೂರು ವಿ.ವಿ ಮರುಮೌಲ್ಯಮಾಪನ ಕ್ಕೂ ಹಾಕಲು ಅವಕಾಶ ನೀಡದೆ ಭಂಡತನವನ್ನು ಪ್ರದರ್ಶಿಸುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಈಗಾಗಲೇ ಸ್ನಾತಕೋತ್ತರ ಪದವಿಗೆ ಪ್ರವೇಶಾತಿ ಗಳು ಒಂದೆಡೆ ಪೂರ್ಣಗೊಳ್ಳುತ್ತಿದ್ದು, ಈ ವಿದ್ಯಾರ್ಥೀಗಳಿಗೆ ಒಂದು ವರ್ಷ ವ್ಯರ್ಥವಾಗುವ ಭಯ ಕೂಡಾ ಕಾಡುತ್ತಿದೆ.ಇನ್ನು ಕೆಲವು ವಿದ್ಯಾರ್ಥಿಗಳು ವಿ.ವಿ. ಯು ನಡೆಯಿಂದ ಮಾನಸಿಕವಾಗಿ ಕುಗ್ಗಿದ್ದು ನಮಗೇನಾದರೂ ಆದರೇ ವಿವಿಯೇ ಕಾರಣ ಎನ್ನುತ್ತಿದ್ದಾರೆ.
ಇತ್ತ ವಿದ್ಯಾರ್ಥಿಗಳಿಗೆ ಇಷ್ಟೇಲ್ಲಾ ಸಮಸ್ಯೆಗಳಾದರೂ ಈ ಭಾಗದ ಸ್ವಯಂ ಘೋಷಿತ ವಿದ್ಯಾರ್ಥಿ ಪರ ಸಂಘಟನೆಗಳಾದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಮತ್ತು NSUI ವಿದ್ಯಾರ್ಥಿಗಳ ಪರ ನಿಲ್ಲದಿದ್ದದ್ದು ದುರಾದೃಷ್ಟವೇ ಸರಿ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ