ಉಡುಪಿ : ಜಿಲ್ಲೆಯ ಪ್ರಸಿದ್ಧ ಶ್ರೀ ಕೃಷ್ಣ ಮಠದಲ್ಲಿ ಜನವರಿ.18 ರಂದು ನಡೆಯುವ ಕೃಷ್ಣಾಪುರ ಮಠದ ಪರ್ಯಾಯ 2022 ರ ಪೂರ್ವಭಾವಿಯಾಗಿ ಚಪ್ಪರ ಮುಹೂರ್ತವು ಡಿಸೆಂಬರ್. 22 ಮಂಗಳವಾರ ರಾಜಾಂಗಣ ಪಾರ್ಕಿಂಗ್ ಏರಿಯಾದಲ್ಲಿ ನಡೆಯಿತು.
ವೇದಮೂರ್ತಿ ಶ್ರೀನಿವಾಸ ಉಪಾಧ್ಯಾಯ ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕೆನರಾ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರಾಮ ನಾಯ್ಕ್ ಅವರು ಕಂಬ ನೆಟ್ಟು ಚಪ್ಪರ ಮುಹೂರ್ತವನ್ನು ಉದ್ಘಾಟಿಸಿದರು.
ಕೆ.ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯೋತ್ಸವ ಸಮಿತಿ ಅಧ್ಯಕ್ಷ ವಿಷ್ಣುಪ್ರಸಾದ ಪಾಡಿಗಾರ್, ಕಾರ್ಯದರ್ಶಿ ಬಿ.ವಿ.ಲಕ್ಷ್ಮೀನಾರಾಯಣ, ಪಿಆರ್‌ಒ ಬೈಕಾಡಿ ಸುಪ್ರಸಾದ್ ಶೆಟ್ಟಿ, ಹೊರೇಕಣಿಕೆ ಸಮಿತಿ ಅಧ್ಯಕ್ಷ ಯು.ರಾಘವೇಂದ್ರರಾವ್, ರಾಮಚಂದ್ರ ಉಪಾಧ್ಯಾಯ, ಭಾಸ್ಕರರಾವ್ ಕಿದಿಯೂರು, ಪ್ರವೀಣ್ ಉಪಾಧ್ಯಾಯ, ಭಾಸ್ಕರ್ ರಾವ್ ಕಿದಿಯೂರು, ರಾಘವತರಾಮ, ರಾಮಕಾಂತ್ ಭಾಹವತಾಯ, ರಮಾಕಾಂತ್ ಮಾರ್ಪಳ್ಳಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪರ್ಯಾಯ 2022 ರ ಸಿದ್ಧತೆಗಳು ಕೃಷ್ಣ ಮಠದಲ್ಲಿ ಈಗಾಗಲೇ ಪ್ರಾರಂಭವಾಗಿವೆ. ಕೃಷ್ಣಾಪುರ ಮಠವು 2022 ರಲ್ಲಿ ಪರ್ಯಾಯವನ್ನು ಆಯೋಜಿಸುತ್ತದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ