ಕಾರ್ಕಳ:-ಬಾಟಲಿಯಿಂದ ಹೊಟ್ಟೆಗೆ ತಿವಿದು ಸ್ವತಃ ಮಗನೇ ಅಪ್ಪನ ಹತ್ಯೆಗೆ ಯತ್ನಿಸಿದ ಘಟನೆ ಕಾರ್ಕಳದ ನಂದಳಿಕೆ ಎಂಬಲ್ಲಿ ನಡೆದಿದೆ.
ಯಾವುದೇ ಕೆಲಸ ಮಾಡದೆ ಮನೆಯಲ್ಲಿಯೇ ಇದ್ದು, ತಂದೆ ತಾಯಿ ದುಡಿದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ ಮಂಜುನಾಥ್ ಆರೋಪಿಯಾಗಿದ್ದಾನೆ. ಈತ ಸ್ವತಃ ತನ್ನ ತಂದೆ ವಿಶ್ವನಾಥ್ ಅವರಿಗೆ ಗೆ ಬಾಟಲಿಯಿಂದ ಇರಿದು ಹಲ್ಲೆ ನಡೆಸಿದ್ದಾನೆ. ತಂದೆ ಮತ್ತು ಮಗನ ನಡುವೆ ಆಗಿಂದಾಗ್ಗೆ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.
ಈ ಜಗಳ ವಿಪರೀತಕ್ಕೆ ತಲುಪಿ ಬಾಟಲಿಯಿಂದ ತನ್ನ ತಂದೆಯ ಹೊಟ್ಟೆಗೆ ತಿವಿದಿದ್ದಾನೆ.
ಈ ಬಗ್ಗೆ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ