ಮಂಗಳೂರು : ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜ್‌ವೊಂದರಲ್ಲಿ ಎಂಬಿಬಿಎಸ್ ಇಂಟರ್ನ್ ಶಿಪ್ ಮಾಡುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾದ ಘಟನೆ ಬೆಳಕಿಗೆ ಬಂದಿದೆ.
ಬೀದರ್ ಜಿಲ್ಲೆಯ ಆನಂದ ನಗರ ನಿವಾಸಿ ವಿಜಯಕುಮಾರ್ ಗಾಯಕ್ ವಾಡ್ ಎಂಬವರ ಪುತ್ರಿ ವೈಶಾಲಿ ಗಾಯಕ್ ವಾಡ್ (25) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ.
ಈಕೆ ತನ್ನ ಸಹಪಾಠಿ ಜತೆ ಕುತ್ತಾರುವಿನಲ್ಲಿರುವ ಸಿಲಿಕಾನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದು, ಶನಿವಾರ ರಾತ್ರಿ ಈಕೆ ತನ್ನ ಸಹಪಾಠಿ ಜತೆ ಮಾತನಾಡಿದ್ದನ್ನು ಅಪಾರ್ಟ್‌ಮೆಂಟ್‌ನ ಇತರರು ಕಂಡಿದ್ದಾರೆ.
ಆದರೆ ರವಿವಾರ ಬೆಳಗ್ಗೆ 10 ಗಂಟೆಯಾದರೂ ವೈಶಾಲಿ ತನ್ನ ರೂಮಿನಿಂದ ಹೊರಬಾರದ ಕಾರಣ ಆತಂಕಕ್ಕೊಳಗಾದ ಸಹಪಾಠಿಯು ರೂಮಿಗೆ ತೆರಳಿ ನೋಡಿದಾಗ ವೈಶಾಲಿ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಲಾಗಿದೆ.
ಮೆಡಿಕಲ್ ಕಲಿಯುತ್ತಿರುವ ಕೇರಳದ ಪಾಲಕ್ಕಾಡ್ ಮೂಲದ ವಿದ್ಯಾರ್ಥಿಯೊಬ್ಬನನ್ನು ವೈಶಾಲಿ ಪ್ರೀತಿಸುತ್ತಿದ್ದು, ಇವರ ನಡುವಿನ ಭಿನ್ನಾಭಿಪ್ರಾಯ ಆತ್ಮಹತ್ಯೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡು ಕೇರಳದ ಪಾಲಕ್ಕಾಡ್ ಮೂಲದ ನಿವಾಸಿ ಸುಜೀಶ್(24) ಎಂಬಾತನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಉಳ್ಳಾಲ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ