ಉಡುಪಿ, ಡಿ.18: ಕಳೆದ ಡಿಸೆಂಬರ್ ತಿಂಗಳ.13 ರಂದು ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಅಪಹರಿಸಲಾದ 16 ರ ಹರೆಯ ಬಾಲಕಿಯನ್ನು ಕೊಂಕಣ ರೈಲ್ವೆ ಪೊಲೀಸ್ ಪಡೆ ರಕ್ಷಿಸಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಈ ಕುರಿತು ಮಲ್ಪೆ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಹಿನ್ನೆಲೆಯಲ್ಲಿ ಉಡುಪಿ ರೈಲ್ವೆ ನಿಲ್ದಾಣದ ರೈಲ್ವೆ ಪೊಲೀಸರು ರೈಲ್ವೆ ನಿಲ್ದಾಣದ ಸಿಸಿ ಟಿವಿ ದೃಶ್ಯಾವಳಿ ಹಾಗೂ ರೈಲ್ವೆ ರಿಸರ್ವೇಶನ್ ಪಟ್ಟಿಯನ್ನು ಪರಿಶೀಲಿಸಿದ ಸಂದರ್ಭ, ಈ ಬಾಲಕಿ ಕುರ್ಲಾದತ್ತ ತೆರಳುತಿದ್ದ ರೈಲು ನಂ.22114ನ್ನು ಹತ್ತಿರುವುದನ್ನು ಖಚಿತಪಡಿಸಿಕೊಂಡರು
ತಕ್ಷಣ ಅವರು ಕೆಆರ್‌ಸಿಎಲ್‌ನ ಕಂಟ್ರೋಲ್ ರೂಮಿಗೆ ಮಾಹಿತಿಯನ್ನು ರವಾನಿಸಿದರು. ಈ
ಮಾಹಿತಿಯನ್ನನುಸರಿಸಿ ಹಾರ್ದಾದ ಇನ್‌ಸ್ಪೆಕ್ಟರ್ ಅವರು ಕಾಶಿಯತ್ತ ತೆರಳುತಿದ್ದ ರೈಲು ನಂ.15017ನ್ನು ಪರಿಶೀಲಿಸಿದಾಗ ಇದರ ಎಸ್.7 ಕೋಚ್‌ನ ಬರ್ತ್ ನಂ .11ರಲ್ಲಿ ಈ ಬಾಲಕಿ ಪತ್ತೆಯಾದಳು. ಬಾಲಕಿಯ ಬಗ್ಗೆ ಹಾರ್ದಾ ಆರ್‌ಪಿಎಫ್‌ನಿಂದ ಮಾಹಿತಿ ಸಂಗ್ರಹಿಸಿ ಅದನ್ನು ಮಲ್ಪೆ ಪೊಲೀಸರಿಗೆ ರವಾನಿಸಲಾಯಿತು.
ಉಡುಪಿ ರೈಲ್ವೆ ಪೊಲೀಸ್ ಪಡೆಯ ಇನ್‌ಸ್ಪೆಕ್ಟರ್ ಅಮಿತ್ ಯಾದವ್, ಕಾನ್‌ಸ್ಟೇಬಲ್ ಸಜೀರ್ ಹಾಗೂ ಮಹಿಳಾ ಕಾನ್‌ಸ್ಟೇಬಲ್ ಝೀನಾ ಪಿಂಟೊ ಅವರ ಅವಿರತ ಪ್ರಯತ್ನಗಳಿಂದ ಅಪಹೃತ ಬಾಲಕಿಯನ್ನು ರಕ್ಷಿಸಿ, ಸುರಕ್ಷಿತವಾಗಿ ಕರೆತರಲಾಗಿದೆ ಎಂದು ಮಂಗಳೂರು ಕೊಂಕಣ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ವರದಿ:-ಉಡುಪಿ ಫಸ್ಟ್
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ