Slider

ಬೆಂಗಳೂರು:-ಪ್ರೇಯಸಿಯನ್ನು ಕತ್ತು ಹಿಸುಕಿ ಹತ್ಯೆಗೈದ ಭೂಪ ಉಡುಪಿ ಮೂಲದ ಯುವತಿ ಸಾವು 18-12-2021

ಪ್ರಿಯಕರನೊಬ್ಬ ತಾನು ಪ್ರೀತಿಸಿದ ಪ್ರೇಯಸಿಯನ್ನು ಕತ್ತು ಹಿಸುಕಿ ಹತ್ಯೆಗೈದ ಘಟನೆ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹತ್ಯೆಯಾದ ಯುವತಿಯನ್ನು ಉಡುಪಿ ಮೂಲದ ಗಂಗಾ (34) ಎಂಬಾಕೆ ಎಂದು ‌ತಿಳಿದುಬಂದಿದೆ.
ಕೊಲೆಗೈದ  ಆರೋಪಿಯ ಕುರಿತು ಶ್ಯಾಮ್‌‌ (27) ದಾಂಡೇಲಿ ಮೂಲದವನಾಗಿದ್ದು, ವೃತ್ತಿಯಲ್ಲಿ ಯೋಗ ಶಿಕ್ಷಕನಾಗಿದ್ದ. ಗಂಗಾ ಆತನ ತರಬೇತಿ ಕೇಂದ್ರದಲ್ಲಿ ಯೋಗ ಕಲಿಯುತ್ತಿದ್ದಳು. ಈ ಸಂದರ್ಭ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಶ್ಯಾಮ್‌ನಿಂದ ಯೋಗ ತರಬೇತಿ ಪಡೆದಿದ್ದ ಗಂಗಾ ಪ್ರತ್ಯೇಕವಾಗಿ ತರಗತಿ ನಡೆಸುತ್ತಿದ್ದಳು. ಅದಕ್ಕಾಗಿ  ಶ್ಯಾಮನ್‌ ನಿಂದ ಗಂಗಾ ಒಂದು ಲಕ್ಷ ರೂಪಾಯಿ ಪಡೆದಿದ್ದಳು.

ಇಬ್ಬರ ಪ್ರೀತಿ ವಿಚಾರದ ಬಗ್ಗೆ ಮನೆಯಲ್ಲಿ ತಿಳಿಸಿದ್ದು, ಇಬ್ಬರ ಮನೆಯಲ್ಲಿ ಒಪ್ಪಿದ ಬಳಿಕ ವಿವಾಹಕ್ಕೆ ಸಿದ್ದತೆ ಮಾಡಿಕೊಂಡಿದ್ದರು. ಶ್ಯಾಮ್‌‌ ತನ್ನ ಪ್ರೇಯಸಿಗಾಗಿ ರೂಂ ಮಾಡಿಕೊಟ್ಟಿದ್ದ. ಬುಧವಾರ ರಾತ್ರಿ ಮನೆಗೆ ಬಂದ ಸಂದರ್ಭ ಇಬ್ಬರ ನಡುವೆ ಜಗಳ ನಡೆದಿದೆ. ಈ ವೇಳೆ ಕೋಪಕೊಂಡ ಶ್ಯಾಮ್‌‌ ಗಂಗಾಳ ತಲೆಯನ್ನು ಗೋಡೆಗೆ ಬಡಿದು, ಕತ್ತುಹಿಸುಕಿ ಹತ್ಯೆಗೈದಿದ್ದು, ನಂತರ ಪರಾರಿಯಾಗಿದ್ದಾನೆ.

ಈ ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ನ್ಯೂ ಟೌನ್‌ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವರದಿ:-ಉಡುಪಿ ಫಸ್ಟ್
0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo